ಅಹಮದಾಬಾದ್, ನ.16 (DaijiworldNews/SK): ಐಸಿಸಿ ವಿಶ್ವಕಪ್ನಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದು, ಇದೇ ಭಾನುವಾರ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
https://daijiworld.ap-south-1.linodeobjects.com/Linode/img_tv247/16-11-2023akCRICKET.jpg
ಫೈನಲ್ ಪಂದ್ಯದ ಕಾರಣ ಭಾರತವನ್ನು ಹುರಿದುಂಬಿಸಲು ಹೆಚ್ಚಿನ ಸಂಖ್ಯೆಯ ಕ್ರಿಕೆಟ್ ಅಭಿಮಾನಿಗಳು ನಗರದತ್ತ ಧಾವಿಸುತ್ತಿದ್ದು, ಹೀಗಾಗಿ ನಗರದ ಹಲವಾರು ಪ್ರಸಿದ್ಧ ಹೋಟೆಲ್ ದರಗಳು ಮತ್ತು ಪ್ರಯಾಣದ ಟಿಕೆಟ್ ದರಗಳಲ್ಲಿ ಅಸಾಧಾರಣ ಏರಿಕೆಯಾಗಿದೆ ಎಂದು ವರದಿಯಾಗಿದೆ.
ಫೈನಲ್ಗೆ ಕೆಲವೇ ದಿನಗಳು ಇರುವುದರಿಂದ, ಸಾಮಾನ್ಯ ದಿನಗಳಲ್ಲಿ ಹೋಟೆಲ್ ಕೊಠಡಿಯ ಒಂದು ರಾತ್ರಿ ಬಾಡಿಗೆ 5 ಸಾವಿರ ರೂಪಾಯಿ ಇದ್ದು, ಈಗ 50 ಸಾವಿರ ರೂಪಾಯಿಗೆ ಏರಿಯಾಗಿದೆ. ಅಷ್ಟೇ ಅಲ್ಲ ಕೆಲವು ಹೋಟೆಲ್ಗಳ ದರ 1 ಲಕ್ಷ ರೂಪಾಯಿಗೆ ಏರಿಕೆಯಾಗಿದೆ ಎಂದು ವರದಿಯಾಗಿದೆ.ಸದ್ಯದ ವರದಿ ಪ್ರಕಾರ, ಹೆಚ್ಚಿನ ಹೋಟೆಲ್ಗಳು ಸಂಪೂರ್ಣವಾಗಿ ಬುಕ್ ಆಗಿದೆ ಎಂದು ತಿಳಿದು ಬಂದಿದೆ.
ಪಂದ್ಯ ಘೋಷಣೆಯಾದಾಗಿನಿಂದ, ನಗರದಲ್ಲಿ ವಸತಿ ಸೌಕರ್ಯಗಳ ಬೆಲೆಯಲ್ಲಿ ಹಠಾತ್ ಏರಿಕೆಯಾಗುದರ ಜೊತೆಗೆ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಅಹಮದಾಬಾದ್ಗೆ ಹೋಗುವ ವಿಮಾನ ಟಿಕೆಟ್ಗಳ ಬೆಲೆಯೂ 100 ಪಟ್ಟು ಹೆಚ್ಚಾಗಿದೆ.