ಗುಜರಾತ್,ನ 18 (DaijiworldNews/RA): ಪಿಚ್-ಸ್ವಾಪಿಂಗ್ನಿಂದ ಕೋಪಗೊಂಡು ಪಿಚ್ ಸಲಹೆಗಾರ ಅಟ್ಕಿನ್ಸನ್ ಭಾರತ ದೇಶ ತೊರೆದಿದ್ದಾರೆ ಅನ್ನುವ ಮಾತುಗಳು ಕ್ರೀಡಾ ವಲಯದಲ್ಲಿ ಕೇಳಿ ಬಂದಿವೆ.
ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಸೆಮಿಫೈನಲ್ಗೆ ಆತಿಥೇಯ ರಾಷ್ಟ್ರವು ಹೊಸ ಟ್ರ್ಯಾಕ್ ಅನ್ನು ಉಪಯೋಗಿಸದೆ ಹಳೆಯ ಪಿಚ್ನಲ್ಲೇ ಆಡಿದೆ ಎಂದು ಅಟ್ಕಿನ್ಸನ್ ಅವರು ಆರೋಪ ಮಾಡಿದರು ಎನ್ನಲಾಗಿದೆ.
ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಭಾರತ ತಂಡ ತನಗೆ ಬೇಕಾದಂತೆ ಪಿಚ್ ಅನ್ನು ತಯಾರು ಮಾಡುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಇದರ ನಡುವೆ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯ ನಡುವಿನ ವಿಶ್ವಕಪ್ ಫೈನಲ್ಗೆ ಕೆಲವೇ ಗಂಟೆಗಳ ಮೊದಲು ಐಸಿಸಿ ಪಿಚ್ ಸಲಹೆಗಾರ ಆಂಡಿ ಅಟ್ಕಿನ್ಸನ್ ತಮ್ಮ ದೇಶಕ್ಕೆ ಹಿಂತಿರುಗಿದ್ದಾರೆ ಎಂಬ ಸುದ್ದಿಗಳು ಹೊರಬಿದ್ದಿದೆ.
ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಐಸಿಸಿ ಮೂಲಗಳು ಮಾಧ್ಯಮಗಳಿಗೆ ಸ್ಪಷ್ಟಣೆ ನೀಡಿದ್ದು ಐಸಿಸಿ ಪಿಚ್ ಸಲಹೆಗಾರ ಆಂಡಿ ಅಟ್ಕಿನ್ಸನ್ ಅಹ್ಮದಾಬಾದ್ಗೆ ಶುಕ್ರವಾರ ಸಂಜೆಯಷ್ಟೇ ಆಗಮಿಸಿದ್ದು, ಶನಿವಾರದಂದು ಪಿಚ್ ಅನ್ನು ಗಮನಿಸಲಿದ್ದಾರೆ. ಆಂಡಿ ಮನೆಗೆ ಹಿಂತಿರುಗಿಲ್ಲ. ಅವರು ಶುಕ್ರವಾರ ಮಧ್ಯಾಹ್ನ ಐಸಿಸಿ ನಿಯೋಗದೊಂದಿಗೆ ಬಂದಿದ್ದಾರೆ. ಹೀಗಾಗಿ ಮೈದಾನಕ್ಕೆ ಭೇಟಿ ನೀಡಿಲ್ಲ. ಟ್ರ್ಯಾಕ್ನ ಸಿದ್ಧತೆಯನ್ನು ಪರಿಶೀಲಿಸಲು ಅವರು ಶನಿವಾರ ಲಭ್ಯವಿರುತ್ತಾರೆ”ಎಂದು ಹೇಳಿದೆ