ಸೌತ್ ಆಫ್ರಿಕಾ, ನ 30 (DaijiworldNews/MR): 2024ರ ಜೂನ್ ತಿಂಗಳಿನಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್ಗೆ ಅರ್ಹತಾ ಸುತ್ತಿನ ಪಂದ್ಯಗಳು ಈಗಾಗಲೇ ನಡೆಯುತ್ತಿವೆ. ಸದ್ಯ ತಮ್ಮ ಆರು ಪಂದ್ಯಗಳಲ್ಲಿ ಐದು ಗೆಲುವು ಸಾಧಿಸುವ ಮೂಲಕ ಉಗಾಂಡ ತಂಡ ಐಸಿಸಿ ಪುರುಷರ T20 ವಿಶ್ವಕಪ್ನಲ್ಲಿ ಅರ್ಹತೆ ಪಡೆದುಕೊಂಡಿದೆ.
ಈ ಮೂಲಕ ಉಗಾಂಡ ತಂಡ ತಮ್ಮ ಮೊದಲ ಟಿ20 ವಿಶ್ವಕಪ್ ಪಂದ್ಯವನ್ನು ಆಡುವ ಮುಖೇನ ಇತಿಹಾಸ ನಿರ್ಮಿಸಲು ಮುಂದಾಗಿದೆ. ಐಸಿಸಿ ಪುರುಷರ ಟಿ20 ವಿಶ್ವಕಪ್ನಲ್ಲಿ ಭಾಗವಹಿಸುವ 5ನೇ ಆಫ್ರಿಕನ್ ರಾಷ್ಟ್ರವಾಗಿ ಉಗಾಂಡ ಹೊರಹೊಮ್ಮಿದೆ.
ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ ಕೇವಲ 65 ರನ್ಗಳಿಗೆ ಆಲೌಟ್ ಆಯಿತು. ಅಲ್ಪೇಶ್ ರಾಮ್ಜಾನಿ, ದಿನೇಶ್ ನಕ್ರಾಣಿ, ಹೆನ್ರಿ ಸೆನ್ಯೊಂಡೋ ಮತ್ತು ಬ್ರಿಯಾನ್ ಮಸಾಬಾ ತಲಾ ಎರಡು ವಿಕೆಟ್ ಪಡೆದುಕೊಂಡರು. ಜಿಂಬಾಬ್ವೆ ವಿರುದ್ಧ ಉಗಾಂಡ ಐದು ವಿಕೆಟ್ಗಳ ಜಯ ಸಾಧಿಸಿದೆ.
ಈ ಬಾರಿಯ ಟೂರ್ನಿಯ ಆರಂಭದಲ್ಲಿ ತಲಾ ಐದು ತಂಡಗಳ ನಾಲ್ಕು ಗುಂಪುಗಳು ಮೊದಲ ಸುತ್ತಿನಲ್ಲಿ ಮುಖಾಮುಖಿಯಾಗಲಿವೆ. ಪ್ರತಿ ಗುಂಪಿನಿಂದ ಎರಡು ತಂಡಗಳು ಸೂಪರ್ 8ಗೆ ಮುನ್ನಡೆಯುತ್ತವೆ. ಬಳಿಕ ಮತ್ತೆ ಸೂಪರ್ 8ರ ಕೊನೆಯಲ್ಲಿ ನಾಲ್ಕು ತಂಡಗಳು ಸೆಮಿಫೈನಲ್ಗೆ ಅರ್ಹತೆ ಪಡೆಯುತ್ತವೆ.