ಜೋಹಾನ್ಸ್ಬರ್ಗ್, ಡಿ 15 (DaijiworldNews/SK): ಜೋಹಾನ್ಸ್ಬರ್ಗ್ನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯನ್ನು ಡ್ರಾದಲ್ಲಿ ಅಂತ್ಯಗೊಳಿಸಿರುವ ಭಾರತ ಸಮಬಲ ಸಾಧಿಸಿಕೊಂಡಿದೆ.
ಆದರೆ ಈ ಪಂದ್ಯಾಟದಲ್ಲಿ ಯುವ ಆಟಗಾರ ಶುಭ್ಮನ್ ಗಿಲ್ ಕಳಪೆ ಪ್ರದರ್ಶ ನೀಡಿರುವುದು ಭಾರತೀಯ ಆಯ್ಕೆ ತಂಡಕ್ಕೆ ಆತಂಕ ಸೃಷ್ಟಿಸಿದ್ದಾರೆ.
ಡಿ. 14 ರಂದು ನಡೆದ ಪದ್ಯದಲ್ಲಿ ದಕ್ಷಿಣ ಆಫ್ರಿಕಾದ ನಾಯಕ ಏಡೆನ್ ಮಾರ್ಕ್ರಾಮ್ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡು ಭಾರತಕ್ಕೆ ಬ್ಯಾಟಿಂಗ್ ನೀಡಿದರು. ಪಂದ್ಯ ಆರಂಭದಲ್ಲಿ ಭಾರತ ಸ್ಪೋಟಕ ಪ್ರದರ್ಶನ ನೀಡುವ ಮೂಲಕ ಆರಂಭಿಕ ಜೋಡಿಗಳಾದ ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ಕೇವಲ 2.1 ಓವರ್ನಲ್ಲಿ 29 ರನ್ ಗಳನ್ನು ಕಲೆ ಹಾಕುವ ಮೂಲಕ ಭದ್ರ ಬೂನಾದಿಯ ಮುನ್ಸೂಚನೆ ನೀಡಿತ್ತು.
ಆದರೆ, ಮೂರನೇ ಓವರ್ನಲ್ಲಿ ಕೇಶವ್ ಮಹಾರಾಜ್ ಸತತ ಎರಡು ಎಸೆತಗಳಲ್ಲಿ ಶುಭಮನ್ ಗಿಲ್ ಮತ್ತು ತಿಲಕ್ ವರ್ಮಾರ ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಆಘಾತ ನೀಡಿದರು.
ಇನ್ನು ಭಾರತೀಯ ತಂಡದ ಆಯ್ಕೆಗಾರರು ಟಿ20 ಸ್ವರೂಪದ ಜವಾಬ್ದಾರಿಯನ್ನು ಯುವಕರಿಗೆ ನೀಡಲು ನಿರ್ಧರಿಸಿದ್ದಾರೆ. ಆದ್ದರಿಂದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿಯಂತಹ ಆಟಗಾರರು ಕಳೆದ ಹಲವಾರು ಟಿ20 ಸರಣಿಗಳಲ್ಲಿ ಆಡುತ್ತಿಲ್ಲ.
ಇಂತಹ ಪರಿಸ್ಥಿತಿಯಲ್ಲಿ, ಯುವ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಮಾತ್ರ ತಮ್ಮ ಕಳಪೆ ಟಿ20 ಫಾರ್ಮ್ನಿಂದ ತಂಡದ ಆತಂಕ ಹೆಚ್ಚಿಸಿದ್ದಾರೆ.
ವಾಸ್ತವವಾಗಿ ಗಿಲ್ ಕಳೆದ ಒಂದು ವರ್ಷದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದರೆ ಟಿ20 ಮಾದರಿಯಲ್ಲಿ ಗಿಲ್ ಅವರ ಕಳಪೆ ಫಾರ್ಮ್ ನಲ್ಲಿರುವುದು ಆಫ್ರಿಕಾ ಪ್ರವಾಸದಲ್ಲೂ ಇದೇ ಫಾರ್ಮ್ ಮುಂದುವರಿಸಲಿದ್ದಾರಾ ಎಂಬ ಪ್ರಶ್ನೆ ಕಾಡತೊಡಗಿದೆ.