ಮುಂಬೈ,16(DaijiworldNews/AK):ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು 2024ರ ಐಪಿಎಲ್ ಆವೃತ್ತಿಗೆ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ಇಂದು ನೇಮಕ ಮಾಡಿದೆ.
ಹೀಗೆ ಘೋಷಣೆ ಮಾಡಿದ ಕೇವಲ 1ಗಂಟೆಯೊಳಗೆ ಮುಂಬೈ ಇಂಡಿಯನ್ಸ್ ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ 4,00,000 ಫಾಲೋವರ್ಸ್ ಕಳೆದುಕೊಂಡಿದೆ ಎಂದು ತಿಳಿದು ಬಂದಿದೆ.
ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ ವಿಷಯ ತಿಳಿಯುತ್ತಿದ್ದಂತೆ ನಿರಾಸೆ ಹೊಂದಿದ ಅಭಿಮಾನಿಗಳು ಮುಂಬೈ ಫ್ರಾಂಚೈಸಿಗೆ ಗುಡ್ ಬೈ ಹೇಳಿದ್ದಾರೆ ಅಂತ ಹೇಳಲಾಗುತ್ತಿದೆ.
10ವರ್ಷ ತಂಡವನ್ನು ಮುನ್ನಡೆಸಿದ ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆ ಮಾಹಿತಿ ಲಭ್ಯವಿಲ್ಲ.ಅವರು ನಾಯಕತ್ವದ ಹೊರತಾಗಿಯೂ ತಂಡದಲ್ಲಿ ಮುಂದುವರಿಯುತ್ತಾರ ಅನ್ನುವುದು ಯಕ್ಷ ಪ್ರಶ್ನೆಯಾಗಿದೆ.
ಹಾರ್ದಿಕ್ ಪಾಂಡ್ಯ ಆಯ್ಕೆಯನ್ನು ಫ್ರಾಂಚೈಸಿಯ ಗ್ಲೋಬಲ್ ಮುಖ್ಯಸ್ಥ ಮಹೇಲಾ ಜಯವರ್ಧನೆ ಶ್ಲಾಘಿಸಿದ್ದಾರೆ.ಇದು ಪರಂಪರೆ ನಿರ್ಮಿಸುವ ಭಾಗವಾಗಿದೆ ಮತ್ತು ಭವಿಷ್ಯದ ನಿರ್ಧಾರವಾಗಿದೆ.ಈ ತತ್ವಕ್ಕೆ ಅನುಗುಣವಾಗಿ ಹಾರ್ದಿಕ್ ಪಾಂಡ್ಯ ಐಪಿಎಲ್ 2024 ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಿದ್ದಾರೆ.
ರೋಹಿತ್ ಶರ್ಮಾ ಅವರ ಅಸಾಧಾರಣ ನಾಯಕತ್ವಕ್ಕಾಗಿ ನಾವು ಕೃತಜ್ಞತೆ ಸಲ್ಲಿಸುತ್ತೇವೆ. 2013 ರಿಂದ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಅವರ ಅಧಿಕಾರಾವಧಿ ಅಸಮಾನ್ಯವಾಗಿದೆ. ಅವರ ನಾಯಕತ್ವವು ತಂಡಕ್ಕೆ ಸಾಟಿಯಿಲ್ಲದ ಯಶಸ್ಸನ್ನು ತಂದುಕೊಟ್ಟಿದೆ ಮಾತ್ರವಲ್ಲ, ಐಪಿಎಲ್ ಇತಿಹಾಸದಲ್ಲಿ ಅತ್ಯುತ್ತಮ ನಾಯಕರಲ್ಲಿ ಒಬ್ಬರಾಗಿ ಅವರ ಸ್ಥಾನವನ್ನು ಭದ್ರಪಡಿಸಿದೆ ಎಂದು ಅವರು ಹೇಳಿದ್ದಾರೆ.