ಮುಂಬೈ,ಡಿ.21( DaijiworlsNews/RA):ಮುಂಬೈನ ವಾಂಖೆಡೆ ಭಾರತ ಮಹಿಳಾ ಕ್ರಿಕೆಟ್ ತಂಡದ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ತಂಡ ಸಾಧಾರಣ ಮೊತ್ತಕ್ಕೆ ಆಲೌಟ್ ಆಗಿದೆ.
ಇಂದಿನಿಂದ ಆರಂಭವಾಗಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸಿಸ್ ಪಡೆ, ಭಾರತ ಬೌಲರ್ಗಳ ಶಿಸ್ತಿನ ದಾಳಿ ಎದುರು 219 ರನ್ ಗಳಿಸಲಷ್ಟೇ ಗಳಿಸಿತು.
ತಹಿಲಾ ಮೆಕ್ಗ್ರಾ (50), ಬೆತ್ ಮೂನಿ (40) ಹಾಗೂ ನಾಯಕಿ ಅಲಿಸಾ ಹೀಲಿ (38) ಉತ್ತಮ ಪ್ರದರ್ಶನ ನೀಡಿದ್ದು ಉಳಿದ ಆಟಗಾರ್ತಿಯರಿಂದ ಉತ್ತಮ ಪ್ರದರ್ಶನ ಮೂಡಿ ಬರಲಿಲ್ಲ.
ಭಾರತ ತಂಡವನ್ನು ಪರ ಶಿಸ್ತಿನ ದಾಳಿ ಸಂಘಟಿಸಿದ ಪೂಜಾ ವಸ್ತ್ರಾಕರ್ 4 ವಿಕೆಟ್ ಪಡೆದರೆ, ಸ್ನೇಹಾ ರಾಣಾ 3 ಮತ್ತು ದೀಪ್ತಿ ಶರ್ಮಾ 2 ವಿಕೆಟ್ ಕಿತ್ತರು. ಇನ್ನೊಂದು ವಿಕೆಟ್ ರನೌಟ್ ರೂಪದಲ್ಲಿ ಲಭಿಸಿತು.
ಸಾಧಾರಣ ಮೊತ್ತದೆದುರು ಇನಿಂಗ್ಸ್ ಆರಂಭಿಸಿರುವ ಭಾರತದ ಬ್ಯಾಟರ್ಗಳು ಏಕದಿನ ಮಾದರಿಯಂತೆ ರನ್ ಗಳಿಸುತ್ತಿದ್ದಾರೆ. ಸದ್ಯ 10 ಓವರ್ಗಳ ಆಟ ಮುಕ್ತಾಯವಾಗಿದ್ದು, ಟಿಂ ಇಂಡಿಯಾ ವಿಕೆಟ್ ನಷ್ಟವಿಲ್ಲದೆ 64 ರನ್ ಗಳಿಸಿದೆ.
31 ಎಸೆತಗಳಲ್ಲಿ 27 ರನ್ ಗಳಿಸಿರುವ ಶೆಫಾಲಿ ವರ್ಮಾ ಮತ್ತು 31 ಎಸೆತಗಳಲ್ಲಿ 30 ರನ್ ಗಳಿಸಿರುವ ಸ್ಮೃತಿ ಮಂದಾನ ಅವರು ಕ್ರೀಸ್ ನಲ್ಲಿ ಇದ್ದಾರೆ.