ಮುಂಬೈ,ಏ 20(Daijiworld News/MSP): ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದ, ಟೀಂ ಇಂಡಿಯಾ ಆಟಗಾರರಾದ ಕೆ.ಎಲ್ ರಾಹುಲ್-ಹಾರ್ದಿಕ್ ಪಾಂಡ್ಯಾಗೆ ಸುಪ್ರಿಂಕೋರ್ಟ್ ತಲಾ 20 ಲಕ್ಷ ರೂ.ದಂಡ ವಿಧಿಸಿ ಇಬ್ಬರು ಆಟಗಾರರ ಕಿವಿಹಿಂಡಿದೆ.
ಬಿಸಿಸಿಐ ಓಂಬುಡ್ಸ್ಮನ್, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಆದ ಡಿ.ಕೆ. ಜೈನ್, ಎಲ್ ರಾಹುಲ್-ಹಾರ್ದಿಕ್ ಪಾಂಡ್ಯಾ ಇಬ್ಬರನ್ನು ತರಾಟೆಗೆ ತೆಗೆದುಕೊಂಡ “ ಕ್ರಿಕೆಟ್ ಆಟಗಾರರು ಜನರಿಗೆ, ಸಮಾಜಕ್ಕೆ ಮಾದರಿಯಾಗಿರಬೇಕು. ನೀವು ಸಮಾಜದಲ್ಲಿ ಘನತೆ ಹೊಂದಿರುವ ಸ್ಥಾನದಲ್ಲಿ ಇರುವ ಕಾರಣ ನಿಮ್ಮ ವ್ಯಕ್ತಿತ್ವ ಅನೇಕರಿಗೆ ಅನುಕರಣೀಯವಾಗಿರುತ್ತದೆ. ಹೀಗಾಗಿ ಸಮಾಜದಲ್ಲಿ ನಿಮ್ಮ ಘನತೆ ಹಾಗೂ ಜವಾಬ್ದಾರಿಯ ಬಗ್ಗೆ ಅರಿತು ನಡೆಯಬೇಕು ಎಂದು " ಎಚ್ಚರಿಕೆ ನೀಡಿದ್ದಾರೆ.
ದಂಡ ವಿಧಿಸಿದ 20 ಲಕ್ಷದಲ್ಲಿ 10 ಲಕ್ಷವನ್ನ ಪ್ಯಾರಾ ಮಿಲಿಟರಿ ಫೋರ್ಸ್ನ, 10 ಮೃತ ಸೈನಿಕರ ಪತ್ನಿಯರಿಗೆ ತಲಾ 1 ಲಕ್ಷ ಹಾಗೂ ಅಂಧರ ಕ್ರಿಕೆಟ್ ಸಂಸ್ಥೆಯಲ್ಲಿ10 ಲಕ್ಷ ಠೇವಣಿ ಇಡುವಂತೆ ಸೂಚಿಸಿದ್ದಾರೆ. ಮಾತ್ರವಲ್ಲದೆ ಒಂದು ತಿಂಗಳೊಳಗೆ ದಂಡ ಮೊತ್ತವನ್ನ ಪಾವತಿಸದಿದ್ದಲ್ಲಿ ಪಂದ್ಯದ ಸಂಭಾವನೆಯಲ್ಲಿ ಕಡಿತಗೊಳಿಸುವಂತೆ ಬಿಸಿಸಿಐಗೆ ಸೂಚನೆ ನೀಡಿದ್ದಾರೆ.
ಬಾಲಿವುಡ್ ನಿರ್ದೇಶಕ ಕರಣ್ ಜೋಹಾರ್ ನಡೆಸಿಕೊಡುವ ಟಾಕ್ ಶೋನಲ್ಲಿ ಎಲ್ ರಾಹುಲ್-ಹಾರ್ದಿಕ್ ಭಾಗವಹಿಸ್ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಬಿಸಿಸಿಐ ಇವರಿಬ್ಬರಿಗೂ ಟೀಂ ಇಂಡಿಯಾದಿಂದ ಕೆಲ ಕಾಲ ನಿಷೇಧದ ಶಿಕ್ಷೆ ವಿಧಿಸಿತ್ತು. ಆ ಬಳಿಕ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್. ರಾಹುಲ್ ಇಬ್ಬರೂ ಕ್ಷಮೆಯಾಚಿಸಿದ್ದರು.