ವಾಷಿಂಗ್ಟನ್, ಜ 05 (DaijiworldNews/AA): 2024 ರ ಜೂನ್ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ಗೆ ತಯಾರಿ ಪ್ರಾರಂಭವಾಗಿದೆ. ಈ ಮಧ್ಯೆ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಬಿಡುಗಡೆಗೊಂಡಿದೆ.
ಜೂನ್ 1 ರಿಂದ ಪ್ರಾರಂಭವಾಗುವ ಟೂರ್ನಿ ಜೂನ್ 29 ಕ್ಕೆ ಮುಕ್ತಾಯಗೊಳ್ಳಲಿದೆ. ಈಗಾಗಲೇ ಈ ಟೂರ್ನಿಗೆ 20 ತಂಡಗಳನ್ನು ಅಧಿಕೃತಗೊಳಿಸಲಾಗಿದೆ. ಟೂರ್ನಿಯ ಮೊದಲ ಪಂದ್ಯ ಆತಿಥೇಯ ಯುಎಸ್ಎ ಮತ್ತು ಕೆನಡಾ ನಡುವೆ ನಡೆಯಲಿದೆ. ಹಾಗೂ ಬಹುನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯವು ಜೂನ್ 9ರಂದು ನಡೆಯಲಿದ್ದು, ಇವೆರಡು ತಂಡಗಳು ನ್ಯೂಯಾರ್ಕ್ ನಲ್ಲಿ ಮುಖಾಮುಖಿಯಾಗಲಿದೆ.
ಈ ಬಾರಿಯ ಟೂರ್ನಿಯಲ್ಲಿ ಒಟ್ಟು 4 ಗುಂಪುಗಳಂತೆ 20 ತಂಡಗಳು ಕಣಕ್ಕಿಳಿಯಲಿವೆ. ಅಷ್ಟೇ ಅಲ್ಲದೆ ಸೂಪರ್- 12 ಹಂತವನ್ನು ಸೂಪರ್- 8 ಗೆ ಇಳಿಸಲಾಗಿದ್ದು, ಸೂಪರ್- 8 ಗುಂಪಿನಲ್ಲಿ ಮೊದಲ ಸ್ಥಾನ ಗಳಿಸಿದ 4 ತಂಡಗಳು ಸೆಮಿಫೈನಲ್ ತಲುಪಲಿದೆ. ಭಾರತ ತಂಡವು ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಜೂನ್ 05 ರಂದು ಐರ್ಲೆಂಡ್ ವಿರುದ್ಧ ಭಾರತ ತನ್ನ ಮೊದಲ ಪಂದ್ಯವನ್ನು ಆಡಲಿದೆ.
ಇನ್ನು ಜೂನ್ 1 ರಿಂದ ಜೂನ್ 18ರ ವರೆಗೆ ಗುಂಪು ಹಂತದ ಪಂದ್ಯಗಳು ನಡೆಯಲಿದ್ದು, ಜೂನ್ 19 ರಿಂದ ಜೂನ್ 24ರ ವರೆಗೆ ಸೂಪರ್-8 ಪಂದ್ಯಗಳು, ಜೂನ್ 26 ಮತ್ತು ಜೂನ್ 27 ರಂದು ಸೆಮಿಫೈನಲ್ ಪಂದ್ಯಗಳು ನಡಯೆಲಿದೆ. ಹಾಗೂ ಬಾರ್ಬಡೋಸ್ ಮೈದಾನದಲ್ಲಿ ಜೂನ್ 29ರಂದು ಅಂತಿಮ ಪಂದ್ಯ ನಡೆಯಲಿದೆ.
ನಾಲ್ಕು ಗುಂಪಿನಲ್ಲಿರುವ ತಂಡಗಳು:
* ಗುಂಪು-ಎ: ಭಾರತ, ಪಾಕಿಸ್ತಾನ, ಐರ್ಲೆಂಡ್, ಕೆನಡಾ, ಯುಎಸ್ಎ
* ಗ್ರೂಪ್-ಬಿ: ಇಂಗ್ಲೆಂಡ್, ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್ಲೆಂಡ್, ಒಮನ್
* ಗ್ರೂಪ್-ಸಿ: ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನ, ಉಗಾಂಡ, ಪಪುವಾ ನ್ಯೂ ಗಿನಿಯಾ
* ಗ್ರೂಪ್-ಡಿ: ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ನೆದರ್ಲೆಂಡ್ಸ್, ನೇಪಾಳ