ಹೈದರಾಬಾದ್, ಜ 06 (DaijiworldNews/AA): ಕೆಲ ದಿನಗಳ ಹಿಂದಷ್ಟೇ ವೈಎಸ್ ಆರ್ ಕಾಂಗ್ರೆಸ್ ಪಕ್ಷವನ್ನು ಸೇರಿದ್ದ ಭಾರತದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಏಕಾಏಕಿ ಪಕ್ಷದಿಂದ ನಿರ್ಗಮಿಸುವುದಾಗಿ ಘೋಷಿಸಿದ್ದಾರೆ.
ಈ ಬಗ್ಗೆ ಅಂಬಟಿ ರಾಯುಡು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, "ಸ್ವಲ್ಪ ಸಮಯದವರೆಗೆ ರಾಜಕೀಯದಿಂದ ವಿರಾಮ ಪಡೆಯುತ್ತೇನೆ. ಮುಂದಿನ ಕ್ರಮವನ್ನು ಸೂಕ್ತ ಸಮಯದಲ್ಲಿ ತಿಳಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.
10 ದಿನಗಳ ಹಿಂದೆ ವಿಜಯವಾಡದಲ್ಲಿರುವ ಮುಖ್ಯಮಂತ್ರಿ ಕಚೇರಿಯಲ್ಲಿ ಆಂಧ್ರಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ದಿ ಅವರ ಉಪಸ್ಥಿತಿಯಲ್ಲಿ ಅಂಬಟಿ ರಾಯುಡು ಅವರು ಯುವಜನ ಶ್ರಮಿಕ ರೈತ ಕಾಂಗ್ರೆಸ್ (ವೈಎಸ್ ಆರ್ ಸಿಪಿ) ಪಕ್ಷವನ್ನು ಸೇರಿದ್ದರು.
ಇನ್ನು ರಾಯುಡು ಐಪಿಎಲ್ 2023 ರ ಆವೃತ್ತಿಯ ನಂತರ ಎಲ್ಲಾ ರೀತಿಯ ಕ್ರಿಕೆಟ್ ನಿಂದ ನಿವೃತ್ತಿಯನ್ನು ಹೊಂದಿರುತ್ತಾರೆ. ಜೊತೆಗೆ ತಮ್ಮ ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿಯನ್ನು ಘೋಷಿಸಿರುತ್ತಾರೆ. ರಾಯುಡು ಆಡಿರುವ 55 ಏಕದಿನ ಪಂದ್ಯಗಳಲ್ಲಿ ಅವರು 47.05 ಸರಾಸರಿ ಒಂದಿಗೆ ಒಟ್ಟು 1694 ರನ್ ಗಳಿಸಿರುತ್ತಾರೆ.