ಮುಂಬೈ 16(DaijiworldNews/SK): ಜಿಂಬಾಬ್ವೆ ತಂಡದ ನಾಯಕ ಸಿಕಂದರ್ ರಜಾ ಅವರು ಟಿ20 ಕ್ರಿಕೆಟ್ನಲ್ಲಿ ಸತತ 5 ಅರ್ಧಶತಕಗಳನ್ನು ಬಾರಿಸಿ ನೂತನ ದಾಖಲೆ ನಿರ್ಮಿಸಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ಬ್ಯಾಟಿಂಗ್ ದಾಖಲೆಗಳನ್ನು ನೋಡುತ್ತಾ ಹೋದರೆ ಇದರಲ್ಲಿ ಟೀಮ್ ಇಂಡಿಯಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರ ಹೆಸರುಗಳು ಮುನ್ನೆಲೆಯಲ್ಲಿ ಬರುತ್ತವೆ. ಆದರೆ ಇದೀಗ 37 ವರ್ಷದ ಸಿಕಂದರ್ ರಜಾ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಯಾರು ಮಾಡದ ಸಾಧನೆ ಮಾಡಿ ವಿಶ್ವದ ಗಮನ ಸೆಳೆದಿದ್ದಾರೆ.
ಶ್ರೀಲಂಕಾ ಮತ್ತು ಜಿಂಬಾಬ್ವೆ ನಡುವಿನ ಟಿ20 ಪಂದ್ಯದಲ್ಲಿ ಜಿಂಬಾಬ್ವೆ ತಂಡದ ನಾಯಕ ಸಿಕಂದರ್ ರಜಾ ಉತ್ತಮವಾಗಿ ಆಡಿದರೂ ತಂಡ ಜಯಗಳಿಸಲಿಲ್ಲ. ಆದರೆ ಸಿಕಂದರ್ ರಜಾ ಶ್ರೀಲಂಕಾ ವಿರುದ್ಧ ಅರ್ಧಶತಕ ಗಳಿಸುವ ಮೊದಲು, ಅವರು ಕ್ರಮವಾಗಿ ಐರ್ಲೆಂಡ್, ಕೀನ್ಯಾ, ನೈಜೀರಿಯಾ ಮತ್ತು ರುವಾಂಡಾದಲ್ಲಿ ಸತತ 5 ಅರ್ಧಶತಕಗಳನ್ನು ಸಿಡಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.