ನೆದರ್ಲೆಂಡ್ , ಜ 17 (DaijiworldNews/RA):ಭಾರತದ ಚದುರಂಗ ಚತುರ ಆರ್. ಪ್ರಜ್ಞಾನಂದ ಭಾರತದ ನಂ -1 ಆಟಗಾರನಾಗಿ ಹೊರಹೊಮ್ಮಿದ್ದಾರೆ.
ನೆದರ್ಲೆಂಡ್ ನ ವಿಜ್ಕ್ ಆನ್ ಝೀಯಲ್ಲಿ ನಡೆಯುತ್ತಿರುವ 2024 ರ ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್ನಲ್ಲಿ ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ಅವರಿಗೆ ಸೋಲುಣಿಸಿದ್ದು, ಈ ಮೂಲಕ ಭಾರತೀಯ ಗ್ರ್ಯಾಂಡ್ ಮಾಸ್ಟರ್ ಮತ್ತು ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರನ್ನು ಹಿಂದಿಕ್ಕಿ ಆರ್. ಪ್ರಜ್ಞಾನಂದ ಮೊದಲ ಬಾರಿ ಟೀಮ್ ಇಂಡಿಯಾದ ನಂಬರ್ 1 ಚೆಸ್ ಆಟಗಾರ ಎಂಬ ಪಟ್ಟವನ್ನು ಅಲಂಕರಿಸಿದ್ದಾರೆ.
ಪ್ರಜ್ಞಾನಂದ ಅವರು ಈಗಾಗಲೇ ವಿಶ್ವ ಚೆಸ್ ರಂಗದಲ್ಲಿ ತಮ್ಮ ಕೌಶಲ್ಯತೆಯನ್ನು ಪ್ರದರ್ಶಿಸಿದ್ಜು ಟಾಟಾ ಸ್ಟೀಲ್ ಚೆಸ್ ಟೂರ್ನಿಯ 4ನೇ ಮಾಸ್ಟರ್ ರೌಂಡ್ ಸುತ್ತಿನಲ್ಲಿ ನಡೆದ 64 ಸ್ಕ್ವೇಯರ್ಸ್ ಪೈಪೋಟಿಯಲ್ಲಿ ಹಾಲಿ ಚಾಂಪಿಯನ್ ಡಿಂಗ್ ಲಿರಿನ್ ರನ್ನು ಮಣಿಸಿ ಸಂಭ್ರಮಿಸಿದ್ದಾರೆ.
ಹಾಲಿ ಚಾಂಪಿಯನ್ ಡಿಂಗ್ ಲಿರಿನ್ ವಿರುದ್ಧ ನಡೆದ 2023ರ ಚೆಸ್ ಟೂರ್ನಿಯ 4ನೇ ಮಾಸ್ಟರ್ಸ್ ಸುತ್ತಿನಲ್ಲಿ ಲಿರಿನ್ (2780 ಅಂಕ) ರಿಂದ ಕ್ಲಾಸಿಕ್ ರೇಟ್ ನಲ್ಲಿ ಪ್ರಜ್ಞಾನಂದ (2743) ಸೋಲು ಕಂಡಿದ್ದರು.
ಆದರೆ ಇಂದಿನ ಗೆಲುವು ಸಂತಸ ಮೂಡಿಸಿದೆ ಎಂದು ಹೇಳಿದ್ದಾರೆ.
ಟಾಟಾ ಸ್ಟೀಲ್ ಚೆಸ್ ಟೂರ್ನಿಯ ಮಾಸ್ಟರ್ಸ್ ನ 4ನೇ ಸುತ್ತಿನ ಅಂತ್ಯಕ್ಕೆ 5 ಬಾರಿ ಚೆಸ್ ಚಾಂಪಿಯನ್ ರಷ್ಯಾದ ಅನೀಷ್ ಗಿರಿ 2749 ರೇಟಿಂಗ್ ಹಾಗೂ 3.5 ಅಂಕದೊಂದಿಗೆ ಟಾಪ್ 1 ಸ್ಥಾನ ಅಲಂಕರಿಸಿದ್ದರೆ, ಇರಾನ್ ನ ಅಲಿರೆಜಾ ಫಿರೋಜ್ಜಾ(2759, 3) ಹಾಗೂ ಭಾರತದ ಆರ್. ಪ್ರಜ್ಞಾನಂದ (2743, 2.5) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿ ನಿಂತಿದ್ದಾರೆ.
ಭಾರತದ ವಿದಿತ್ ಸಂತೋಷ್ ಗುಜರಾತಿ, ದೊಮ್ಮರಾಜು ಗುಕೇಶ್ 7 ಮತ್ತು 10 ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದರೆ, ಹಾಲಿ ಚಾಂಪಿಯನ್ ಚೀನಾದ ಡಿಂಗ್ ಲಿರಿನ್ 2742 ರೇಟಿಂಗ್ ಹಾಗೂ 2 ಪಾಯಿಂಟ್ಸ್ ನೊಂದಿಗೆ 8ಸ್ಥಾನ ಅಲಂಕರಿಸಿದ್ದಾರೆ.