ಬೆಂಗಳೂರು,ಜ 23(DaijiworldNews/PC): ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಗೆ ಸಿದ್ದವಾಗಿದ್ದು. ಈ ವರ್ಷ ರೋಹಿತ್ ಶರ್ಮಾ ಪಡೆ ಆಡ್ತಿರೋ ಮೊದಲ ಟೆಸ್ಟ್ ಸರಣಿ ಇದಾಗಿದೆ.
ಜನವರಿ 25ರಿಂದ ಹೈದ್ರಾಬಾದ್ನಲ್ಲಿ ಮೊದಲ ಟೆಸ್ಟ್ ಆರಂಭವಾಗಲಿದೆ.
ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸ್ಥಾನದಲ್ಲಿ ಕೆ.ಎಸ್ ಭರತ್ ಮತ್ತು ಧೃವ್ ಜುರೆಲ್ ಮಧ್ಯೆ ಕಾಂಪಿಟೇಷನ್ ಏರ್ಪಟ್ಟಿದ್ದು ಈ ಇಬ್ಬರಲ್ಲಿ ಯಾರನ್ನ ಆಡಿಸಬೇಕು ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.
ಆದ್ರೆ, ಈ ನಡುವೆ ಕೆ.ಎಸ್ ಭರತ್ ಭಾರತ A ತಂಡದ ಪರ ಭರ್ಜರಿ ಶತಕ ಸಿಡಿಸಿದ್ದಾರೆ. ಇಂಗ್ಲೆಂಡ್ ಲಯನ್ಸ್ ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭರತ್ ಸೆಂಚುರಿ ಬಾರಿಸಿದ್ದಾರೆ.
ಇದೇ ಮೊದಲ ಬಾರಿ ಟೀಂ ಇಂಡಿಯಾಗೆ ಆಯ್ಕೆಯಾಗಿರೋ ಧೃವ್, ಬ್ಯಾಟಿಂಗ್ & ಬೌಲಿಂಗ್ ಎರಡರಲ್ಲೂ ಮಿಂಚಬಲ್ಲರು. ಫಸ್ಟ್ ಕ್ಲಾಸ್ ಅಂಕಿಅಂಶಗಳು ವಿಚಾರದಲ್ಲಿ ಭರತ್ಗಿಂತ ಧೃವ್ ಮುಂದಿದ್ದಾರೆ.
ಈವರೆಗು 19 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿ, 46.47ರ ಸರಾಸರಿಯಲ್ಲಿ 790 ರನ್ ಕಲೆಹಾಕಿದ್ದಾರೆ. ಇದ್ರಲ್ಲಿ 1 ಶತಕ ಮತ್ತು 5 ಅರ್ಧಶತಕ ಸೇರಿವೆ. ವಿಕೆಟ್ ಕೀಪಿಂಗ್ನಲ್ಲೂ ಧೃವ್ ಉತ್ತಮ ಆಟಗಾರ ಎಂದು ಎನಿಸಿದ್ದಾರೆ.
ವಿಕೆಟ್ ಕೀಪರ್ ಸ್ಥಾನಕ್ಕಾಗಿ ಧೃವ್ ಮತ್ತು ಭರತ್ ಮಧ್ಯೆ ಪೈಪೋಟಿ ಜೋರಾಗಿದ್ದು ಅನುಭವದ ಆಧಾರದ ಮೇಲೆ ಕೆ.ಎಸ್ ಭರತ್ಗೆ ಅವಕಾಶ ಸಿಗುವ ಸಾಧ್ಯತೆಯಿದ್ದು ಭರತ್ ಸರಿಯಾದ ಪ್ರದರ್ಶನವನ್ನು ತೋರದೇ ಇದ್ದರೆ ಭಾರತದ ತಂಡಕ್ಕೆ ಹಿನ್ನಡೆಯಾಗಲಿದೆ.