ಫೆ 8(DaijiworldNews/SK): ಇಶಾನ್ ಕಿಶನ್ ಅರ್ಧದಲ್ಲೇ ಟೀಮ್ ಇಂಡಿಯಾವನ್ನು ತೊರೆಯಲು ವೈಯಕ್ತಿಕ ಕಾರಣ ಎಂದು ತಿಳಿದಿದ್ದಾ ಕ್ರಿಕೆಟ್ ಅಭಿಮಾನಿಗಳಿಗೆ ಇದೀಗ ರೇವ್ ಸ್ಟೋಟ್ಸ್ ವರದಿ ಬಿಗ್ ಶಾಕ್ ನೀಡಿದೆ.
ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಭಾರತ ತಂಡವನ್ನು ತೊರೆದಿದ್ದರು. ಇದ್ದಕ್ಕೆ ಕ್ರಿಕೆಟ್ ಮಂಡಳಿಯು ಸಮ್ಮತಿ ನೀಡಿತ್ತು.
ಇದೀಗ ರೇವ್ಸ್ಟೋಟ್ಸ್ ವರದಿಯ ಪ್ರಕಾರ, ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಜಿತೇಶ್ ಶರ್ಮಾ ಅವರಿಗೆ ಚಾನ್ಸ್ ನೀಡುವುದಕ್ಕೆ ಇಶಾನ್ ಕಿಶನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ಕಾರಣದಿಂದಾಗಿ ಅವರು ಅರ್ಧದಲ್ಲೇ ಟೀಮ್ ಇಂಡಿಯಾದಿಂದ ತೊರೆದಿದ್ದಾರೆ ಎಂದು ತಿಳಿಸಲಾಗಿದೆ.
ಇನ್ನು ಜಿತೇಶ್ ಶರ್ಮಾ ವಿಕೆಟ್ ಕೀಪರ್ ಬ್ಯಾಟ್ಸ್ಮನ್. ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಆಗಿದ್ದ ಕಾರಣ ಅವರನ್ನು ಸೌತ್ ಆಫ್ರಿಕಾ ವಿರುದ್ಧ ಟಿ20 ಸರಣಿಯಲ್ಲಿ ಕಣಕ್ಕಿಳಿಸಲಾಗಿತ್ತು. ಇದರಿಂದ ಇಶಾನ್ ಕಿಶನ್ ಅವಕಾಶ ವಂಚಿತರಾಗಿದ್ದರು. ಈ ಬಗ್ಗೆ ಟೀಮ್ ಮ್ಯಾನೇಜ್ಮೆಂಟ್ ಜೊತೆ ಇಶಾನ್ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.
ಇಷ್ಟು ಮಾತ್ರವಲ್ಲದೇ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಈ ಕಾರಣದಿಂದ ಟೆಸ್ಟ್ನಲ್ಲೂ ವಿಕೆಟ್ ಕೀಪರ್ ಆಗಿ ಆಯ್ಕೆಯಾಗುವುದು ಅನುಮಾನ ಎಂದು ಗೊತ್ತಾಗುತ್ತಿದ್ದಂತೆ ಇಶಾನ್ ಕಿಶನ್ ಟೀಮ್ ಇಂಡಿಯಾವನ್ನು ತೊರೆದು ಭಾರತಕ್ಕೆ ಮರಳಿದ್ದಾರೆ ಎಂದು ರೇವ್ಸ್ಪೋರ್ಟ್ಸ್ ತಿಳಿಸಿದೆ.