ಮುಂಬಯಿ, ಫೆ 13 (DaijiworldNews/ AK): ಭಾರತದ ಹಿರಿಯ ಟೆಸ್ಟ್ ಕ್ರಿಕೆಟಿಗ , ಮಾಜಿ ನಾಯಕ ದತ್ತಾಜಿರಾವ್ ಗಾಯಕ್ವಾಡ್ ವಯೋಸಹಜ ಕಾಯಿಲೆಗಳಿಂದ ಮಂಗಳವಾರ ನಿಧನರಾದರು. 12 ದಿನಗಳಿಂದ ಬರೋಡಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು. ಭಾರತದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಮತ್ತು ರಾಷ್ಟ್ರೀ ಯ ಕೋಚ್ ಅಂಶುಮಾನ್ ಗಾಯಕ್ವಾಡ್ ಅವರ ತಂದೆಯಾಗಿದ್ದಾರೆ.
ಗಾಯಕ್ವಾಡ್1952 ಮತ್ತು 1961 ರ ನಡುವೆ ಭಾರತಕ್ಕಾಗಿ 11 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರು 1959 ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ರಾಷ್ಟ್ರೀ ಯ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸಿದ ಸಾಧನೆ ಅವರದಾಗಿದೆ.
ಬಲಗೈ ಬ್ಯಾಟ್ಸ್ ಮ್ಯಾನ್ ಆಗಿದ್ದ ಅವರು 1952 ರಲ್ಲಿ ಲೀಡ್ಸ್ನಲ್ಲಿ ಇಂಗ್ಲೆಂಡ್ ವಿರುದ್ಧ ಪಾದಾರ್ಪಣೆ ಮಾಡಿದರು.1961 ರಲ್ಲಿ ಚೆನ್ನೈನಲ್ಲಿ ಪಾಕಿಸ್ತಾನದ ವಿರುದ್ಧ ಅಂತರರಾಷ್ಟ್ರೀಯ ಪಂದ್ಯವು ಅವರ ಕೊನೆಯದಾಗಿತ್ತು.ದತ್ತಾಜಿರಾವ್ 1947 ರಿಂದ 1961 ರವರೆಗೆ ರಣಜಿ ಟ್ರೋ ಫಿಯಲ್ಲಿ ಬರೋಡಾವನ್ನು ಪ್ರತಿನಿಧಿಸಿದ್ದರು. ಅವರು 14 ಶತಕಗಳನ್ನು ಒಳಗೊಂಡಂತೆ 47.56ಸರಾಸರಿಯಲ್ಲಿ 3139 ರನ್ ಗಳಿಸಿದರು ಹೆಮ್ಮೆ ದತ್ತಾಜಿರಾವ್ದು ಆಗಿದೆ.
1959–60ರ ಇಸವಿಯಲ್ಲಿ ಮಹಾರಾಷ್ಟ್ರದ ವಿರುದ್ಧ ನಡೆದ ಪಂದ್ಯಾವಳಿಯಲ್ಲಿ 249 ರನ್ ಗಳಿಸಿ ಔಟಾಗದೆ ಅತ್ಯಧಿಕ ಸ್ಕೋ ರ್ ಪಡೆದಿದ್ದರು. ಅವರು 2016 ರಲ್ಲಿ ಭಾರತದ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟಿಗರಾಗಿದ್ದರು.