ಇಸ್ಲಾಮಾಬಾದ್, ಫೆ 15 (DaijiworldNews/MS): ಪಾಕಿಸ್ತಾದ ಯುವ ಟೆನಿಸ್ ಆಟಗಾರ್ತಿ ಝೈನಾಬ್ ಅಲಿ ನಖ್ವಿ ಅವರು ಐಟಿಎಫ್ ಜೂನಿಯರ್ ಪಂದ್ಯಾವಳಿಯ ಅಭ್ಯಾಸ ವೇಳೆ ಸಾವನ್ನಪ್ಪಿದ್ದಾರೆ. 17 ವರ್ಷದ ಆಟಗಾರ್ತಿಗೆ ಹೃದಯಾಘಾತವಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.
ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಮುಂಬರುವ ಐಟಿಎಫ್ ಜೂನಿಯ ರ್ಟೂರ್ನಿಯಲ್ಲಿ ಆಡಲು ಅವರು ಸಿದ್ಧತೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ತಮ್ಮ ಕೋಣೆಯಲ್ಲಿದ್ದ ಅವರು ಕುಸಿದುಬಿದ್ದು ಸಾವಿಗೀಡಾದರು. ಪ್ರಜ್ಞಾಹೀನರಾದ ಝೈನಾಬ್ ಅವರನ್ನು ತಕ್ಷಣ ಆಸ್ಪತ್ರೆ ಗೆ ಸಾಗಿಸಲಾಯಿತಾದರೂ ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು. ಝೈನಾಬ್ ಜೊತೆಗೆ ಅವರ ಅಜ್ಜಿ ಕೂಡಾ ಕೋಣೆಯಲ್ಲಿದ್ದರು.
"ಝೈನಾಬ್ ಉದಯೋನ್ಮು ಖ ಆಟಗಾರ್ತಿಯಾಗಿದ್ದ ರು. ವೈದ್ಯ ರು ಅವರಿಗೆ ಹೃದಯಾಘಾತ ಆಗಿದೆ ಎಂದು ಸಂದೇಹ ವ್ಯ ಕ್ತಪಡಿಸಿದ್ದಾರೆ. ಆದ್ದರಿಂದ ಸಹಜ ಸಾವು ಎಂದು ದಾಖಲಿಸಲಾಗಿದೆ. ಆಟಗಾರ್ತಿಯ ದೇಹದ ಮರಣೋತ್ತರ ಪರೀಕ್ಷೆ ಬೇಡವೆಂದು ಪಾಲಕರೂಮನವಿಮಾಡಿದ್ದ ರು. ಆದ್ದ ರಿಂದ ಕುಟುಂಬದವರಿಗೆಆಟಗಾರ್ತಿಯ ಪಾರ್ಥಿವ ಶರೀರವನ್ನು ಹಸ್ತಾಂತರಿಸಲಾಗಿದೆ" ಎಂದು ಪಾಕಿಸ್ತಾನ ಟೆನಿಸ್ ಫೆಡರೇಷನ್ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತ ಆಟಗಾರ್ತಿಗೆ ಗೌರವ ಸೂಚಕವಾಗಿ, ಐಟಿಎಫ್ ಈವೆಂಟ್ನ ಮಂಗಳವಾರದ ಎಲ್ಲಾ ಪಂದ್ಯಗಳನ್ನು ಬುಧವಾರಕ್ಕೆ ಮರು ನಿಗದಿಪಡಿಸಲಾಗಿದೆ.