ಚೆನ್ನೈ, ಫೆ 17(DaijiworldNews/AA): ಟೆಹರಾನ್ ನಲ್ಲಿ ಇಂದು ನಡೆದ ಏಷ್ಯನ್ ಒಳಾಂಗಣ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಭರವಸೆಯ ಓಟಗಾರ್ತಿ ಜ್ಯೋತಿ ಯರ್ರಾಜಿ ಅವರು ಮಹಿಳೆಯರ 60 ಮೀ ಹರ್ಡಲ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.
ಕಳೆದ ವರ್ಷ ಇದೇ ಏಷ್ಯನ್ ಅಥ್ಲೆಟಿಕ್ಸ್ ಕೂಟದಲ್ಲಿ ಜ್ಯೋತಿ ಅವರು 60 ಮೀ ದೂರವನ್ನು 8.13 ಸೆಕೆಂಡ್ ಗಳಲ್ಲಿ ಕ್ರಮಿಸಿ, ರನ್ನರ್ ಅಪ್ ಸ್ಥಾನ ಗಳಿಸಿದ್ದರು. 2022 ರ ಏಷ್ಯನ್ ಗೇಮ್ಸ್ ನಲ್ಲಿ 100 ಮೀ. ಹರ್ಡಲ್ಸ್ ಓಟದಲ್ಲಿ ಬೆಳ್ಳಿಯ ಪದಕ ಗೆದ್ದಿದ್ದರು. ಆದರೆ ಈ ಬಾರಿ 60 ಮೀ ದೂರವನ್ನು 8.12 ಸೆಕೆಂಡ್ ಗಳಲ್ಲಿ ಕ್ರಮಿಸಿ ಚಿನ್ನದ ಪದ ಗಳಿಸುವುದರೊಂದಿಗೆ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ.
24 ವರ್ಷದ ಜ್ಯೋತಿ ಅವರು, 100 ಮೀ. ಹರ್ಡಲ್ಸ್ ನಲ್ಲಿ ಹಾಲಿ ಏಷ್ಯನ್ ಇಂಡೋರ್ ಚಾಂಪಿಯನ್ ಆಗಿರುತ್ತಾರೆ. ಕಳೆದ ವರ್ಷ ಬ್ಯಾಂಕಾಕ್ ನಲ್ಲಿ ನಡೆದ ಈ ಕೂಟದಲ್ಲಿ ಚಿನ್ನ ಪಡೆದಿದ್ದರು. ಜ್ಯೋತಿ ಅವರು ಹಾಂಗ್ಝೌ ಏಷ್ಯನ್ ಗೇಮ್ಸ್ ನಲ್ಲಿ 100 ಮೀ. ಹರ್ಡಲ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.