ಇಂಗ್ಲೇಂಡ್,ಏ27(Daijiworld News/AZM): ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದ ಬ್ಯಾಟ್ಸ್ ಮನ್ ಅಲೆಕ್ಸ್ ಹೇಲ್ಸ್ ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದಿದ್ದಾರೆ.
ಮನೋರಂಜನಾ ಡ್ರಗ್ ಸೇವಿಸಿದ ಅಲೆಕ್ಸ್ ಹೇಲ್ಸ್ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯಿಂದ 21 ದಿನಗಳ ನಿಷೇಧಕ್ಕೆ ಗುರಿಯಾಗಿದ್ದಾರೆ.
ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದ ಹೇಲ್ಸ್, ಮುಂದಿನ ತಿಂಗಳು 2ನೇ ವಾರದವರೆಗೂ ಕ್ರಿಕೆಟ್ ಚಟುವಟಿಕೆಗಳಿಂದ ದೂರವಿರಲಿದ್ದು, ತಂಡದ ಸಿದ್ಧತೆಗೆ ಪೆಟ್ಟು ಬಿದ್ದಿದೆ. ಅವರನ್ನು ತಂಡದಿಂದ ಹೊರಹಾಕುವ ಸಾಧ್ಯತೆ ಇದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಮನೋರಂಜನಾ ಡ್ರಗ್ಸ್ ನೀತಿಯಡಿ ಹೇಲ್ಸ್ 2ನೇ ಬಾರಿಗೆ ಸಿಕ್ಕಿ ಬೀಳುತ್ತಿದ್ದು, ದೊಡ್ಡ ಮೊತ್ತದ ದಂಡ ಸಹ ವಿಧಿಸುವ ಸಾಧ್ಯತೆ ಇದೆ.
30 ವರ್ಷದ ಹೇಲ್ಸ್ ಇಂಗ್ಲೆಂಡ್ ಪರ 70 ಪಂದ್ಯಗಳನ್ನಾಡಿ 6 ಶತಕ ಹಾಗೂ 14 ಅರ್ಧಶತಕ ಸಹಿತ 37.8ರ ಸರಾಸರಿಯಲ್ಲಿ 2419 ರನ್ ಬಾರಿಸಿದ್ದಾರೆ. 2019ರ ಏಕದಿನ ವಿಶ್ವಕಪ್ ಟೂರ್ನಿಯು ಮೇ 30ರಿಂದ ಆರಂಭವಾಗಲಿದೆ. ಭಾರತ ಜೂನ್ 05ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ.