ನವದೆಹಲಿ, ಎ30(Daijiworld News/SS): ಶ್ರೀಲಂಕಾದ ಕುಮಾರ ಸಂಗಕ್ಕರ ಅವರ ಹೆಸರಿನಲ್ಲಿದ್ದ ದಾಖಲೆ ಸರಿಗಟ್ಟುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ಕೀಪರ್ ರಿಷಬ್ ಪಂತ್ ಇತಿಹಾಸ ನಿರ್ಮಿಸಿದ್ದಾರೆ.
2019r ಐಪಿಎಲ್ ಪಂದ್ಯದಲ್ಲಿ ಪಂತ್ ಈ ಸಾಧನೆ ಮಾಡಿದ್ದಾರೆ. ಧವನ್ ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಹೆನ್ರಿಕ್ ಕ್ಲೇಸನ್ ಮತ್ತು ಗುರ್ಕೀರತ್ ಸಿಂಗ್ ಕ್ಯಾಚ್ ಮೂಲಕ ಪಂತ್ 2019ರ ಐಪಿಎಲ್ನಲ್ಲಿ ಒಟ್ಟು 20 ಕ್ಯಾಚ್ ದಾಖಲೆ ನಿರ್ಮಿಸಿದರು. ಇದಕ್ಕಾಗಿ ಪಂತ್ ಒಟ್ಟು 12 ಇನ್ನಿಂಗ್ಸ್ಗಳನ್ನು ಬಳಸಿಕೊಂಡಿದ್ದಾರೆ.
ಸೀಸನ್ ಒಂದರಲ್ಲಿ ಹೆಚ್ಚು ಆಟಗಾರರನ್ನು ಪೆವಿಲಿಯನ್ಗಟ್ಟಿದ ದಾಖಲೆ ಹಿಂದೆ ಸಂಗಕ್ಕರ ಹೆಸರಿನಲ್ಲಿತ್ತು. 2011ರಲ್ಲಿ ಡೆಕ್ಕನ್ ಚಾರ್ಜರ್ಸ್ ಪರ ಸಂಗಕ್ಕರ ಒಟ್ಟು 13 ಇನ್ನಿಂಗ್ಸ್ಗಳಲ್ಲಿ 17 ಕ್ಯಾಚ್ ಮತ್ತು 2 ಸ್ಟಂಪ್ಡ್ ಸೇರಿ ಒಟ್ಟು 19 ವಿಕೆಟ್ ಕೆಡವುವಲ್ಲಿ ನೆರವಾಗಿದ್ದರು. ಇಂಗ್ಲೆಂಡ್ ವಿಶ್ವಕಪ್ ಕ್ರಿಕೆಟ್ ತಂಡದಿಂದ ಹೊರಬಿದ್ದ ಅಲೆಕ್ಸ್ ಹೇಲ್ಸ್ 2018/19ರ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ (ಬಿಪಿಎಲ್)ನಲ್ಲಿ ಧಾಕಾ ಡೈನಮೈಟ್ಸ್ ಪ್ರತಿನಿಧಿಸಿದ್ದ ನೂರುಲ್ ಹಸನ್ ಕೂಡ 19 ವಿಕೆಟ್ ಮುರಿಯುವಲ್ಲಿ ನೆರವಾಗಿ ಇದೇ ದಾಖಲೆಯನ್ನು ಹಂಚಿಕೊಂಡಿದ್ದರು.
ಈಗ ಪಂತ್ ಅದಕ್ಕೂ ಒಂದು ಹೆಜ್ಜೆ ಮುಂದಿಟ್ಟು ಇತಿಹಾಸದ ಪುಟ ಸೇರಿದ್ದಾರೆ.