ಉತ್ತರ ಪ್ರದೇಶ,ಮೇ 04 (Daijiworld News/MSP): ಉತ್ತರ ಪ್ರದೇಶದ ಅಪ್ರಾಪ್ತ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳು, ಅಪ್ಪ ರೋಗಪೀಡಿತರಾಗಿ ಮಲಗಿದ ನಂತರ ಮನೆ ಜವಾಬ್ದಾರಿ ಹೊತ್ತು ಹುಡುಗರಂತೆ ವೇಷ ಧರಿಸಿ ಕ್ಷೌರ ಕೆಲಸ ಮಾಡುತ್ತಿದ್ದ ವಿಚಾರ ಬಹಳಷ್ಟು ಸುದ್ದಿ ಮಾಡಿದ್ದು ಹಳೆ ಸಂಗತಿ.
ಆದರೆ ಹೊಸ ವಿಚಾರ ಎಂದರೆ ಈ ಇಬ್ಬರು ಯುವತಿಯರ ಸೆಲೂನ್ ಗೆ ಭೇಟಿ ಮಾಡಿದ ಕ್ರಿಕೆಟ್ ದೇವರೆಂದೆ ಖ್ಯಾತರಾದ ಸಚಿನ್ ತೆಂಡೂಲ್ಕರ್ ಅದೇ ಹೇರ್ ಸೆಲೂನ್ ನಲ್ಲಿ ತಮ್ಮ ಗಡ್ಡ ತೆಗೆಸಿಕೊಂಡಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರುವ ಸಚಿನ್, ನಾನು ಇಲ್ಲಿಯ ತನಕ ಬೇರೆ ಯಾರಿಂದಲೂ ಶೇವ್ ಮಾಡಿಸಿಕೊಂಡಿರಲಿಲ್ಲ. ಆದರೆ ಈ ದಾಖಲೆ ಇವತ್ತು ಮುರಿದು ಹೋಯಿತು .ಈ ಬಾರ್ಬರ್ಶಾಪ್ ಹುಡುಗಿಯರನ್ನ ಭೇಟಿಯಾಗಿ, ಸ್ಕಾಲರ್ಶಿಪ್ ವಿತರಿಸಿದ್ದು ನನ್ನ ಭಾಗ್ಯ ಎಂದು ಸಚಿನ್ ಬರೆದುಕೊಂಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಕ್ಷೌರದಂಗಡಿ ನಡೆಸುತ್ತಿದ್ದ ತಂದೆ ರೋಗಪೀಡಿತರಾಗಿ ಕೆಲಸ ಮಾಡಲಾಗದ ಸ್ಥಿತಿಗೆ ಬಂದಾಗ, ಅನಿವಾರ್ಯವಾಗಿ 18 ವರ್ಷದ ಜ್ಯೋತಿ ಕುಮಾರಿ ಮತ್ತು 16 ವರ್ಷದ ನೇಹಾ ಎಂಬ ಹೆಣ್ಣುಮಕ್ಕಳು ತಮ್ಮ ಹೆಸರನ್ನು ದೀಪಕ್ ಮತ್ತು ರಾಜು ಎಂದು ಹೆಸರು ಬದಲಾಯಿಸಿಕೊಂಡು ಮನೆ ನಡೆಸಲೆಂದು ಸಹೋದರಿಯರು ಕತ್ತರಿ ಮತ್ತು ಶೇವಿಂಗ್ ಬ್ಲೇಡ್ ಹಿಡಿದಿದ್ದರು. ಇದೇ ರೀತಿ 4 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಸಾಕಷ್ಟು ಸುದ್ದಿಯಾಗಿತ್ತು.
ಹುಡುಗರಂತೆ ಕೂದಲು ಕತ್ತರಿಸಿಕೊಂಡು ಶರ್ಟ್, ಪ್ಯಾಂಟ್ ಧರಿಸಿ ಕ್ಷೌರವೃತ್ತಿ ಆರಂಭಿಸಿದ್ದರು. ಇದೇ ರೀತಿ 4 ವರ್ಷಗಳಿಂದ ಇವರು ಕೆಲಸ ಮಾಡುತ್ತಿದ್ದಾರೆ. ಸ್ವಂತ ಊರಲ್ಲಿ ಸುಮಾರು 100 ಮನೆಗಳಿದ್ದು, ಹಲವರಿಗೆ ಸಹೋದರಿಯರ ವಿಚಾರ ತಿಳಿದಿತ್ತು. ಆದರೆ ಹೊರ ಊರಿನವರಿಗೆ ಸಹೋದರಿಯರು ವೇಷ ಬದಲಾಯಿಸಿ ದುಡಿಯುತ್ತಿದ್ದ ವಿಚಾರ ತಿಳಿದಿರಲಿಲ್ಲ . ಇಬ್ಬರು ಸಹೋದರಿಯರು ದಿನಕ್ಕೆ 400 ರೂ. ಗಳಿಸುತ್ತಿದ್ದು ಈ ದುಡ್ಡು ಅವರ ತಂದೆಯ ಚಿಕಿತ್ಸೆಗೆ ಮತ್ತು ಕುಟುಂಬ ನಿರ್ವಹಣೆ ವೆಚ್ಚಗಳಿಗಾಗಿ ಬಳಸುತ್ತಿದ್ದಾರಂತೆ.
2014ರಲ್ಲಿ ಸಲೂನ್ ಆರಂಭಿಸಿದಾಗ ಸಾಕಷ್ಟು ಸಮಸ್ಯೆಯೊಂದಿಗೆ ಊರವರೆಲ್ಲಾ ತಮಾಷೆ ಮಾಡಲು ಆರಂಭಿಸಿದರು. ಆದರೆ ಬೇರೆ ದಾರಿ ನಮಗೆ ತೋಚದೆ ಎಲ್ಲವನ್ನು ನಿರ್ಲಕ್ಷಿಸಿ ಮುನ್ನಡೆಯಲಾರಂಭಿಸಿದ್ದರು. ಮಧ್ಯಾಹ್ನ ಬಳಿಕ ಬಾಲಕಿಯರು ಹೇರ್ ಸಲೂನ್ನ್ನು ತೆರೆಯುತ್ತಾರೆ. ಬೆಳಿಗ್ಗೆ ಕಾಲೇಜಿಗೆ ತೆರಳುತ್ತಾರೆ. ಜ್ಯೋತಿ ಸದ್ಯ ಪದವಿ ಮುಗಿಸಿದ್ದಾರೆ. ನೇಹಾ ಇನ್ನೂ ಓದುತ್ತಿದ್ದಾರೆ.