ನವದೆಹಲಿ, ಏ.22(DaijiworldNews/AK):ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧದ ಪಂದ್ಯದ ವೇಳೆ ಅಂಪೈರ್ ನಿರ್ಧಾರಕ್ಕೆ ವಿರೋಧಿಸಿದ ಪರಿಣಾಮ ಸ್ಟಾರ್ ಕ್ರಿಕೆಟಿಗ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ಪಂದ್ಯದ ಒಟ್ಟು ಶುಲ್ಕದ ಶೇ 50ರಷ್ಟು ದಂಡ ವಿಧಿಸಿದೆ.
ಈಡನ್ ಗಾರ್ಡನ್ನಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ತಂಡದ ಹರ್ಷಿತ್ ರಾಣಾ ಅವರು ಎಸೆದ ಚೆಂಡು ಫುಲ್ಟಾಸ್ ಆಗಿ ಸೊಂಟದಿಂದ ಎತ್ತರ ಮಟ್ಟದಲ್ಲಿತ್ತು. ಇದನ್ನು ಎದುರಿಸುವ ಸಂದರ್ಭದಲ್ಲಿ ಅದು ಕ್ಯಾಚ್ ಆಗಿ ಕೊಹ್ಲಿ ಔಟ್ ಆದರು.
ಟಿವಿ ಅಂಪೈ ರ್ ಮೈಕೆಲ್ ಗಾಫ್ ಅವರು ಔಟ್ ನಿರ್ಣ ಯ ನೀ ಡಿದ್ದಕ್ಕೆ ವಿರಾಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಫೀಲ್ಡ್ ಅಂಪೈರ್ ಜೊತೆ ವಾಗ್ವಾದಕ್ಕೆ ನಿಂತಿದ್ದರು. ನೋ ಬಾಲ್ ಅಥವಾ ಔಟಾ ಎನ್ನುವುದನ್ನು ಪರಿಶೀಲಿಸುವಂತೆ ಹೇಳಿದ್ದರು.ಮೂರನೇ ಅಂಪೈರ್ ಪರಿಶೀಲಿಸಿದ ವೇಳೆಯೂ ಅದು ಔಟ್ ಎಂದೇ ತೀರ್ಪು ಬಂದಿತ್ತು.
ಹತಾಶೆಗೊಂಡ ಕೊಹ್ಲಿ ಕೋಪದಿಂದ ಡ್ರೆಸ್ಸಿಂಗ್ ರೂಮ್ ಬಳಿ ಇರುವ ತ್ಯಾಜ್ಯದ ತೊಟ್ಟಿಗೆ ಬ್ಯಾಟ್ನಿಂದ ಹೊಡೆದಿದ್ದರು.ಈ ಕಾರಣದಿಂದ ಐಪಿಎಲ್ ಏಪ್ರಿಲ್ 21ರಂದು ಕೋಲ್ಕತ್ತ ನೈಟ್ ರೈಡರ್ಸ್ ತಂಡ ವಿರುದ್ಧ ನಡೆದ ಪಂದ್ಯದ ವೇಳೆ ಐಪಿಎಲ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಬೆಂಗಳೂರು ತಂಡದ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ಪಂದ್ಯದ ಒಟ್ಟು ಶುಲ್ಕದ ಶೇ 50ರಷ್ಟು ದಂಡ ವಿಧಿಸಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.