ಮುಂಬೈ, ಮೇ.3(DaijiworldNews/AK): ಮ್ಯಾಚ್ ಫಿಕ್ಸಿಂಗ್ ಆರೋಪದಡಿಯಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟಿಗ ಡೆವೊನ್ ಥಾಮಸ್ಗೆ ಐಸಿಸಿ ಐದು ವರ್ಷಗಳ ನಿಷೇಧದ ಶಿಕ್ಷೆ ವಿಧಿಸಿದೆ.
ಥಾಮಸ್ ಮೇಲೆ 7 ನಿಯಮಗಳನ್ನು ಉಲ್ಲಂಘಿಸಿದ ಆರೋಪ ಕೇಳಿಬಂದಿತ್ತು. ಈ ಕಾರಣದಿಂದ ನಡೆದ ತನಿಖೆಯಲ್ಲಿ ಥಾಮಸ್ ಮೇಲೆ ಇರುವ ಆರೋಪಗಳೆಲ್ಲ ನಿಜವೆಂದು ಸಾಭೀತಾಯಿತು.
ಅಲ್ಲದೇ ವಿಂಡೀಸ್ ಬ್ಯಾಟರ್ ಡೆವೊನ್ ಥಾಮಸ್, ಶ್ರೀಲಂಕಾ ಕ್ರಿಕೆಟ್, ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಮತ್ತು ಕೆರಿಬಿಯನ್ ಪ್ರೀಮಿಯರ್ ಲೀಗ್ನ ಭ್ರಷ್ಟಾಚಾರ-ವಿರೋಧಿ ನಿಯಮಗಳನ್ನು ಉಲ್ಲಂಘಿಸಿರುವುದನ್ನು ಸ್ವತಃ ಒಪ್ಪಿಕೊಂಡಿದ್ದಾರೆ ಎಂದು ಐಸಿಸಿ ಹೇಳಿದೆ.
ಕಳೆದ ವರ್ಷ ಮೇ 23 ರಂದೇ ಡೆವೊನ್ ಥಾಮಸ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿತ್ತು. ಆ ಬಳಿಕ ಥಾಮಸ್ರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿತ್ತು.
ಇದೀಗ ಆರೋಪ ಸಾಭೀತಾದ ಬಳಿಕ ಅವರಿಗೆ ಈ ಐದು ವರ್ಷಗಳ ನಿಷೇಧದ ಶಿಕ್ಷೆ ವಿಧಿಸಲಾಗಿದೆ.34 ವರ್ಷದ ಬ್ಯಾಟ್ಸ್ಮನ್ ಡೆವೊನ್ ಥಾಮಸ್ 2009 ರಲ್ಲಿ ವೆಸ್ಟ್ ಇಂಡೀಸ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. ಆ ಬಳಿಕ 2011 ರ ವಿಶ್ವಕಪ್ನಲ್ಲಿ ವೆಸ್ಟ್ ಇಂಡೀಸ್ ತಂಡದ ಭಾಗವಾಗಿದ್ದ ಥಾಮಸ್ 2022 ರಲ್ಲಿ ವಿಂಡೀಸ್ ಪರ ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದರು.