ನವದೆಹಲಿ, ಮೇ.8(DaijiworldNews/AK): ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರಿಗೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಡಿ ಶೇಕಡ 30ರಷ್ಟು ಪಂದ್ಯದ ಶುಲ್ಕವನ್ನು ದಂಡವಾಗಿ ವಿಧಿಸಲಾಗಿದೆ.
ಮಂಗಳವಾರ ನಡೆದ ಡೆಲ್ಲಿ ವಿರುದ್ಧದ 222 ರನ್ ಚೇಸ್ ನಲ್ಲಿ ಸಂಜು ಸ್ಯಾಮ್ಸನ್ 86 ರನ್ ಪಡೆದರು.. ಆದರೆ, ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಲು ಸಾಧ್ಯವಾಗಿಲ್ಲ. ಈ ಪಂದ್ಯದ 16ನೇ ಓವರ್ ನಲ್ಲಿ ಅವರು ಬೌಂಡರಿ ಬಳಿ ಶಾಯ್ಹೋ ಪ್ ತಮ್ಮ ಕ್ಯಾಚ್ ಹಿಡಿದಾಗ ಅಂಪೈರ್ ಔಟ್ ಕೊಟ್ಟಿದ್ದನ್ನು ಪ್ರಶ್ನಿಸಿದ್ದರು. ಇದೇ ವಿಚಾರವಾಗಿ ದಂಡ ವಿಧಿಸಿರಬಹುದು ಎಂದು ವರದಿ ತಿಳಿಸಿದೆ.
ಹೋಪ್ ಕ್ಯಾಚ್ ಹಿಡಿದಾಗ ಅವರ ಕಾಲು ಬೌಂಡರಿ ಗೆರೆಗೆ ತಾಕಿತ್ತೇ ಎಂಬುದು ಪ್ರಶ್ನೆಯಾಗಿತ್ತು.ಮೂರನೇ ಅಂಪೈರ್ ಔಟ್ ಎಂದು ತೀರ್ಪಿ ತ್ತರು.ಆದರೆ, ಇದನ್ನು ಒಪ್ಪದ ಸ್ಯಾಮ್ಸನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಮೊದಲಿಗೆ ಪೆವಿಲಿಯನ್ ಕಡೆಗೆ ತೆರಳುತ್ತಿದ್ದ ಅವರು, ಬಳಿಕ ಹಿಂದಿರುಗಿ ಅಂಪೈರ್ ಜೊತೆಮಾತಿನ ಚಕಮಕಿ ನಡೆಸಿದರು.
‘ಐಪಿಎಲ್ ನೀ ತಿ ಸಂ ಹಿತೆಯ ಆರ್ಟಿ ಕಲ್ 2.8ರ ಅಡಿಯ ಹಂ ತ–1ರ ಉಲ್ಲಂ ಘನೆ ಮಾಡಿದ್ದಾರೆ. ತಮ್ಮ ತಪ್ಪನ್ನು ಅವರು ಒಪ್ಪಿಕೊಂ ಡಿದ್ದು,ಮ್ಯಾಚ್
ರೆಫರಿಯವರ ದಂಡವನ್ನು ಸ್ವೀಕರಿಸಿದ್ದಾರೆ.