ಬೆಂಗಳೂರು, ಮೇ. 14(DaijiworldNews/AA): ಇನ್ನೇನು ಐಪಿಎಲ್ ಸೀಸನ್ 17 ಮುಕ್ತಾಯ ಹಂತ ತಲುಪಿದೆ. ಇದೀಗ ಇದರ ಬೆನ್ನಲ್ಲೇ ಮುಂಬರುವ ಸೀಸನ್ ನಲ್ಲಿ ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತೊರೆದು ಆರ್ ಸಿಬಿ ಪರ ಕಣಕ್ಕಿಳಿಯಲಿದ್ದಾರೆ. ಹಾಗೂ ಆರ್ ಸಿಬಿಯ ನಾಯಕರಾಗಲಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ ಎಲ್ಎಸ್ ಜಿ ತಂಡ ಹೀನಾಯವಾಗಿ ಸೋಲು ಕಂಡಿತ್ತು. ಹೀಗಾಗಿ ಎಲ್ಎಸ್ ಜಿ ತಂಡದ ಮಾಲೀಕರಾದ ಸಂಜಯ್ ಗೊಯೆಂಕಾ ಅವರು ಕೆಎಲ್ ರಾಹುಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದ್ದರಿಂದ ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತೊರೆಯಲಿದ್ದಾರೆ ಎಂಬ ಸುದ್ದಿ ಹರಡಿದೆ.
ಐಪಿಎಲ್ ಸೀಸನ್ 18ಗಾಗಿ ಮೆಗಾ ಹರಾಜು ನಡೆಯಲಿದ್ದು, ಈ ಹರಾಜಿನಲ್ಲಿ ರಾಹುಲ್ ಕೂಡ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೆ ಕೆಎಲ್ ರಾಹುಲ್ ಖರೀದಿಗೆ ಆರ್ ಸಿಐ ಮುಂದಾಗುವ ಸಾಧ್ಯತೆ ಇದೆ. ಮುಂದಿನ ಸೀಸನ್ ನಲ್ಲಿ ಫಾಫ್ ಡುಪ್ಲೆಸಿಸ್ ಹಾಗೂ ದಿನೇಶ್ ಕಾರ್ತಿಕ್ ಅವರು ಮುಂದುವರೆಯುವ ಸಾಧ್ಯತೆ ಇಲ್ಲ. ಹೀಗಾಗಿ ಕೆಎಲ್ ರಾಹುಲ್ ಅವರು ಇವರಿಬ್ಬರ ಸ್ಥಾನವನ್ನು ತುಂಬಲಿದ್ದಾರೆ ಎಂದು ಹೇಳಲಾಗುತ್ತಿದೆ.