ಚೆನ್ನೈ, ಮೇ 07(Daijiworld News/SM): ಚೆನ್ನೈ ಸೂಪರ್ ಕಿಂಗ್ಸ್ ಪರ ಆಟವಾಡುತ್ತಿದ್ದ ಕೇದಾರ್ ಜಾಧವ್ ಐಪಿಎಲ್ ನಿಂದ ಔಟ್ ಆಗಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ಜತೆಗಿನ ಪಂದ್ಯದಲ್ಲಿ ಭುಜದ ಗಾಯದಿಂದಾಗಿ ಜಾದವ್ ಐಪಿಎಲ್ ನಿಂದ ಹೊರಗೆ ಉಳಿದಿದ್ದಾರೆ.
ಆದರೆ, ಜಾದವ್ ವಿಶ್ವಕಪ್ ಪಂದ್ಯಗಳಿಗೆ ಲಭ್ಯವಾಗಲಿದ್ದಾರೆಯೇ ಎಂಬ ಬಗ್ಗೆ ಚರ್ಚೆಗಳು ಶುರುವಾಗಿದೆ. ಭುಜದ ಗಾಯದಿಂದಾಗಿ ಜಾಧವ್ ಎರಡು ವಾರಗಳ ಕಾಲ ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ತಿಳಿಸಿದ್ದಾರೆ. ಆದರೆ, ಎರಡು ವಾರಗಳ ವಿಶ್ರಾಂತಿಯಲ್ಲಿ ಜಾಧವ್ ಅವರು ಮತ್ತೆ ಆಡಲು ಅರ್ಹರಾಗಬಹುದಾ? ಅನ್ನೋದು ಸದ್ಯದ ಪ್ರಶ್ನೆ.
ಇನ್ನು ಕ್ರಿಕೆಟ್ ಜೀವನದಲ್ಲಿ ಹಲವು ಬಾರಿ ಕಳಪೆ ಫಿಟ್ ನೆಸ್ ನಿಂದಾಗಿ ಪಂದ್ಯಗಳಿಂದ ಹೊರಗುಳಿದಿರುವ ಜಾಧವ್ ಮೇ 22ರೊಳಗಾಗಿ ತನ್ನ ಫಿಟ್ ನೆಸ್ ತೋರಿಸುವ ಅನಿವಾರ್ಯತೆ ಇದೆ. ಒಂದೊಮ್ಮೆ ಫಿಟ್ ನೆಸ್ ಕಾಯ್ದುಕೊಂಡಲಿ ಅವರಿಗೆ ವಿಶ್ವಕಪ್ ನಲ್ಲಿ ಆಡುವ ಅವಕಾಶ ಸಿಗಲಿದೆ. ಮಧ್ಯಮ ಕ್ರಮಾಂಕದಲ್ಲಿ ಜಾಧವ್ ಆಡುವುದರಿಂದ ಟೀಂ ಇಂಡಿಯಾ ಕೂಡ ಅವರ ಫಿಟ್ ನೆಸ್ ನತ್ತ ಗಮನ ನೀಡುತ್ತಿದೆ.
ಒಂದೊಮ್ಮೆ ಮೇ 22ರೊಳಗೆ ಫಿಟ್ ನೆಸ್ ಆಗದಿದ್ದಲ್ಲಿ ಈ ಬಾರಿಯ ವಿಶ್ವಕಪ್ ನಲ್ಲಿ ಆಡುವುದು ಅನುಮಾನ.