ಮುಂಬೈ, ಮೇ 23 (DaijiworldNews/ AK): ಕಳೆದ 16 ಸೀಸನ್ಗಳಲ್ಲಿ ಆರ್ಸಿಬಿ ಪಾಲಿಗೆ ಮರೀಚಿಕೆಯಾಗಿದ್ದ ಟ್ರೋಫಿಯನ್ನು ಈ ಬಾರಿ ಗೆಲ್ಲುವ ನಿರೀಕ್ಷೆ ಇತ್ತು. ಆದರೆ ಭರವಸೆ ಹುಸಿಯಾಗಿದೆ. ಅಹದಾಬಾದ್ನಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ತಂಡಕ್ಕೆ ಸೋಲುಣಿಸಿ ರಾಜಸ್ಥಾನ್ ರಾಯಲ್ಸ್ ತಂಡ 2ನೇ ಕ್ವಾಲಿಫೈಯರ್ ಪ್ರವೇಶಿಸಿದೆ.
ಈ ಮೂಲಕ ಆರ್ಸಿಬಿ ತಂಡದ ಐಪಿಎಲ್ ಅಭಿಯಾನ ಅಂತ್ಯಗೊಂಡಿದೆ. ಆರ್ಸಿಬಿ ತಂಡದ ಈ ಸೋಲನ್ನು ಅಭಿಮಾನಿಗಳಿಗೆ ಒಪ್ಪಿಕೊಳ್ಳಲಾಗುತ್ತಿಲ್ಲ. ಇತ್ತ ಆರ್ಸಿಬಿ ತಂಡ ಕೂಡ ನೋವಿನಲ್ಲಿದ್ದಾರೆ. ಈ ಸೋಲಿನ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ನೋವನ್ನುಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಆರ್ಸಿಬಿ ಸೋತಿರುವುದು ನಿಜವಾಗಲೂ ನೋವಿನ ಸಂಗತಿ. ಆದರೆ ಅಭಿಮಾನಿಯಾಗಿ ನೋಡುವುದಾದರೆ, ಆರ್ಸಿಬಿ ತಂಡವು ಅದ್ಭುತ ಪ್ರದರ್ಶನವನ್ನೇ ನೀಡಿದ್ದಾರೆ. ಮೇ ತಿಂಗಳ ಆರಂಭದಲ್ಲಿ ಆರ್ಸಿಬಿ ತಂಡವು ಪ್ಲೇಆಫ್ ಪ್ರವೇಶಿಸುವ ಭರವಸೆಗಳೇ ಇರಲಿಲ್ಲ. ಆದರೆ ಆ ಬಳಿಕ ನಮ್ಮಲ್ಲಿ ಹೊಸ ಆಶಾಭಾವನೆ ಮೂಡಿಸಿದ ಆರ್ಸಿಬಿ ಹುಡುಗರ ಬಗ್ಗೆ ನನಗೆ ನಿಜಕ್ಕೂ ಹೆಮ್ಮೆಯಿದೆ ಎಂದು ಎಬಿಡಿ ಹೇಳಿದ್ದಾರೆ.
ಈಗ ಸೋತಿದ್ದೇವೆ ಅಷ್ಟೇ. ಮುಂದಿನ ವರ್ಷ ಆರ್ಸಿಬಿ ಮತ್ತಷ್ಟು ಬಲಿಷ್ಠವಾಗಿ ಬರಲಿದೆ. ಅಲ್ಲದೆ ಐಪಿಎಲ್ 2025 ರಲ್ಲಿ ಆರ್ಸಿಬಿ ಟ್ರೋಫಿಯನ್ನು ಎತ್ತಿ ಹಿಡಿಯುವುದು ನಿಶ್ಚಿತ ಎಂದು ಎಬಿ ಡಿವಿಲಿಯರ್ಸ್ ಭವಿಷ್ಯ ನುಡಿದಿದ್ದಾರೆ.