ಕೌಲಾಲಂಪುರ, ಮೇ.25 (DaijiworldNews/AA): ಮಲೇಷ್ಯಾ ಮಾಸ್ಟರ್ಸ್ 500 ಟೂರ್ನಿಯಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಸೆಮಿಫೈನಲ್ ಪಂದ್ಯದಲ್ಲಿ ಥಾಯ್ಲೆಂಡ್ನ ಆಟಗಾರ್ತಿ ಬುಸಾನನ್ ಒಂಗ್ ಬಮ್ರುಂಗ್ ಫಾನ್ ಅವರನ್ನು ಮಣಿಸಿ, ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.
ಇಂದು ಕೌಲಾಲಂಪುರದಲ್ಲಿ ನಡೆದ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸಿಂಧು ಅವರು ಸೆಮಿಫೈನಲ್ ನಲ್ಲಿ ವಿಜಯ ಸಾಧಿಸುವ ಮೂಲಕ ಫೈನಲ್ ತಲುಪಿದ್ದಾರೆ. ಬುಸಾನನ್ ಹಾಗೂ ಸಿಂಧು 88 ನಿಮಿಷಗಳ ಕಾಲ ಈ ಪಂದ್ಯ ನಡೆಯಿತು. ಈ ಪಂದ್ಯದ ಮೊದಲ ಸೆಟ್ ನಲ್ಲಿ ಸಿಂಧು ಸೋಲನ್ನು ಅನುಭವಿಸಬೇಕಾಯಿತು. ಆದರೆ ನಂತರ ಅತ್ಯುತ್ತಮ ಪುನರಾಗಮನ ಮಾಡಿದ ಅವರು ಮುಂದಿನ ಎರಡು ಸೆಟ್ಗಳಲ್ಲಿ ಏಕಪಕ್ಷೀಯವಾಗಿ ಜಯ ಗಳಿಸಿದರು. ಈ ಮೂಲಕ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾದರು.
ಇನ್ನು ಸಿಂದೂ ಅವರು ಕಳೆದ 2 ವರ್ಷಗಳಿಂದ ಫಾರ್ಮ್ ಕಳೆದುಕೊಂಡಿದ್ದರು. ಈ ಟೂರ್ನಿಗೆ ಸಾಕಷ್ಟು ತಯಾರಿಯನ್ನ ಮಾಡಿಕೊಂಡಿದ್ದ ಸಿಂಧೂ ಅವರು ಇದೀಗ ಫೈನಲ್ ತಲುಪಿದ್ದಾರೆ. ಈ ಮೂಲಕ ಕಳೆದ ಒಂದು ವರ್ಷದಲ್ಲಿ ಇದೇ ಮೊದಲ ಬಾರಿಗೆ ಸಿಂಧೂ ಅವರು ಪ್ರಮುಖ ಟೂರ್ನಿಯೊಂದರ ಫೈನಲ್ನಲ್ಲಿ ಆಡುತ್ತಿದ್ದಾರೆ. ಇದಕ್ಕೂ ಮುನ್ನ 2023 ರಲ್ಲಿ ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್ ನಲ್ಲಿ ರನ್ನರ್ ಅಪ್ ಆಗಿದ್ದರು. 2022 ರಲ್ಲಿ ಸಿಂಗಾಪುರ ಓಪನ್ಸ್ ಟ್ರೋಫಿ ಪಡೆದಿದ್ದರು. ಇದೀಗ ಈ ಪ್ರಶಸ್ತಿ ಗೆಲುವಿನೊಂದಿಗೆ ಸಿಂಧೂ ಅವರು ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆಯುವ ವಿಶ್ವಾಸದಲ್ಲಿದ್ದಾರೆ.