ಸ್ಟಾವೆಂಜರ್, ಜೂ. 02(DaijiworldNews/AA): ಭಾರತದ ಚೆಸ್ ಗ್ರ್ಯಾಂಡ್ ಮಾಸ್ಟರ್ ಆರ್ ಪ್ರಜ್ಞಾನಂದ ಅವರು ವಿಶ್ವದ 2ನೇ ಶ್ರೇಯಾಂಕಿತ ಫ್ಯಾಬಿಯಾನೊ ಕರುವಾನಾ ಅವರನ್ನು ಮಣಿಸಿದ್ದಾರೆ.
ಸ್ಟಾವೆಂಜರ್ನಲ್ಲಿ ನಡೆದ ನಾರ್ವೆ ಚೆಸ್ ಸ್ಪರ್ಧೆಯಲ್ಲಿ ಫ್ಯಾಬಿಯಾನೊ ಕರುವಾನಾ ಅವರನ್ನು ಸೋಲಿಸುವ ಮೂಲಕ ಪ್ರಜ್ಞಾನಂದ ಅವರು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದ್ದಾರೆ. ಜೊತೆಗೆ ಈ ಗೆಲುವಿನೊಂದಿಗೆ ಎಫ್ಐಡಿಇ ಚೆಸ್ ರ್ಯಾಂಕಿಂಗ್ನಲ್ಲಿ ಪ್ರಜ್ಞಾನಂದ ಟಾಪ್-10 ಗೆ ಎಂಟ್ರಿ ನೀಡಿದ್ದಾರೆ.
ಇದಕ್ಕೂ ಮುನ್ನ ಇದೇ ಟೂರ್ನಿಯಲ್ಲಿ ವಿಶ್ವದ ನಂಬರ್ 1 ಚದುರಂಗ ಚತುರ ಮ್ಯಾಗ್ನಸ್ ಕಾರ್ಲ್ಸೆನ್ ಅವರ ವಿರುದ್ಧ ಆರ್ ಪ್ರಜ್ಞಾನಂದ ವಿಜಯ ಸಾಧಿಸಿದ್ದರು. ಇದೀಗ ಫ್ಯಾಬಿಯಾನೊ ಕರುವಾನಾ ಅವರನ್ನು ಮಣಿಸುವ ಮೂಲಕ ನಾರ್ವೆ ಕ್ಲಾಸಿಕಲ್ ಗೇಮ್ ಚೆಸ್ ಟೂರ್ನಿಯಲ್ಲಿ ಪ್ರಜ್ಞಾನಂದ ಮುಂದೆ ನುಗ್ಗಿದ್ದಾರೆ.
ಇನ್ನು ನಾರ್ವೆ ಚೆಸ್ ಟೂರ್ನಿಯ 5 ಸುತ್ತುಗಳ ಮುಕ್ತಾಯದ ವೇಳೆಗೆ ಹಿಕರು ನಕಮುರಾ ಅಗ್ರಸ್ಥಾನ ಅಲಂಕರಿಸಿದ್ದರೆ, ಕಾರ್ಲ್ಸೆನ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಹಾಗೆಯೇ ಫ್ಯಾಬಿಯಾನೊ ಕರುವಾನಾ ವಿರುದ್ಧ ಗೆಲುವು ಸಾಧಿಸಿ 8.5 ಅಂಕದೊಂದಿಗೆ ಆರ್. ಪ್ರಜ್ಞಾನಂದ ೩ನೇ ಸ್ಥಾನಕ್ಕೇರಿದ್ದಾರೆ.