ಮುಂಬೈ, ಮೇ 09(Daijiworld News/SM): ಭಾರತ ತಂಡಕ್ಕೆ 2 ವಿಶ್ವಕಪ್ ತಂದುಕೊಡುವಲ್ಲಿ ಮಹತ್ವದ ಪಾತ್ರವಹಿಸಿದವರು ಆಲ್ರೌಂಡರ್ ಯುವರಾಜ್ ಸಿಂಗ್. ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಯುವಿ ಕಾಣಿಸಿಕೊಳ್ಳುತ್ತಿಲ್ಲವಾದರೂ, ಈ ಬಾರಿಯ ಐಪಿಎಲ್ ನಲ್ಲಿ ಆಡಿದ್ದಾರೆ. ಆದರೆ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ಮುಂಬೈ ಪರ ಆಟವಾಡಿದ್ದ ಅವರು ಪಂದ್ಯದುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ್ದರು. ಇದೀಗ ಮುಂಬೈ ತಂಡ ಈ ಸಲದ ಫೈನಲ್ ಗೆ ಎಂಟ್ರಿಯಾಗಿದೆ. ಫೈನಲ್ ನಲ್ಲಿ ಯುವಿ ಆಡಲಿದ್ದಾರಾ ಎನ್ನುವುದು ಸದ್ಯ ಅಭಿಮಾನಿಗಳಲ್ಲಿರುವ ಕುತೂಹಲ.
ಮುಂಬೈ ಇಂಡಿಯನ್ಸ್ ಫೈನಲ್ನಲ್ಲಿ ಅವಕಾಶ ಕೊಟ್ಟು ಕೊನೆ ಐಪಿಎಲ್ ಪಂದ್ಯವನ್ನು ಸ್ಮರಣೀಯವನ್ನಾಗಿಸುವುದೇ ಎಂಬ ವಿಚಾರ ಚರ್ಚೆಯಾಗುತ್ತಿದೆ. ಯುವಿ ಪಾಲಿಗೆ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಬಾಗಿಲು ಮುಚ್ಚಿದೆ. ಕಳೆದ ಬಾರಿ ಐಪಿಎಲ್ ಹರಾಜಿನಲ್ಲಿ ಅವರನ್ನು ಯಾರೂ ಕೊಂಡುಕೊಳ್ಳದಿದ್ದಾಗ ತಂಡದ ಮೆಂಟರ್ ಸೆಹ್ವಾಗ್ರ ಒತ್ತಾಯದ ಮೇರೆಗೆ ಪಂಜಾಬ್ ತಂಡಕ್ಕೆ ಸೇರಿಸಿಕೊಂಡಿತ್ತು. ಈ ವರ್ಷವೂ ಯಾರೂ ಖರೀದಿಸದಿದ್ದಾಗ ಮುಂಬೈ ಇಂಡಿಯನ್ಸ್ 1 ಕೋಟಿ ರೂಗೆ ಖರೀದಿಸಿ ಯುವಿಯಿಂದ ಅದ್ಭುತ ಪ್ರದರ್ಶನ ನಿರೀಕ್ಷಿಸಿತ್ತು. ಆದರೆ, ಯುವರಾಜ್ 4 ಪಂದ್ಯಗಳಲ್ಲಿ ಕೇವಲ 98 ರನ್ಗಳಿಸಿ ನಿರಾಸೆ ಮೂಡಿಸಿದರು.
ಈ ಹಿನ್ನೆಲೆಯಲ್ಲಿ ಫೈನಲ್ ಪಂದ್ಯದಲ್ಲಿ ಯುವಿಗೆ ತಂಡ ಅವಕಾಶ ನೀಡಲಿದೆಯಾ ಅನ್ನೋದು ಸದ್ಯ ಉಳಿದಿರುವ ಪ್ರಶ್ನೆ. ಯುವಿ ಇನ್ನೇನೋ ನಿವೃತ್ತಿಯ ಅಂಚಿನಲ್ಲಿದ್ದಾರೆ. ಒಂದೊಮ್ಮೆ ಅವಕಾಶ ಸಿಕ್ಕಿದ್ದಲ್ಲಿ ಉತ್ತಮ ಪ್ರದರ್ಶನದೊಂದಿಗೆ ಯುವಿ ಪಂದ್ಯವನ್ನು ಸ್ಮರಣೀಯವನ್ನಾಗಿಸಬೇಕಾಗಿದೆ. ನಿವೃತ್ತಿಯ ಅಂಚಿನಲ್ಲಿರುವ ಅವರಿಗೆ ಇದುವೇ ಕೊನೆಯ ಪಂದ್ಯವೆಂದರೂ ತಪ್ಪಗಲಾರದು. ಒಂದೊಮ್ಮೆ ಅವಕಾಶ ಸಿಕ್ಕಿದ್ದೇ ಆದಲ್ಲಿ ಅದಕ್ಕೆ ಸರಿಯಾದ ಪ್ರದರ್ಶನ ನೀಡುವ ಜವಾಬ್ದಾರಿ ಯುವಿ ಮೇಲಿದೆ. ಈ ಎಲ್ಲಾ ಕುತೂಹಲಗಳಿಗೆ ಮೇ ೧೨ರಂದು ತೆರೆ ಬೀಳಲಿದೆ.