ವಿಶಾಖಪಟ್ಟಣಂ, ಮೇ 10(Daijiworld News/SM): 12ನೇ ಆವೃತಿಯ ಐಪಿಎಲ್ ಪಂದ್ಯದ ಫೈನಲ್ ಪಂದ್ಯದಲ್ಲಿ ಮುಂಬೈ ತಂಡದೊಂದಿಗೆ ಸೆಣಸಲು ಚೆನ್ನೈ ಮುಂದಾಗಿದೆ. ಶುಕ್ರವಾರ ನಡೆದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಡ್ಯಾಶರ್ ತಂಡವನ್ನು ಮಣಿಸುವ ಮೂಲಕ ಧೋನಿ ಪಡೆ ಫೈನಲ್ ಗೆ ಎಂಟ್ರಿಕೊಟ್ಟಿದೆ.
ವಿಶಾಖಪಟ್ಟಣದಲ್ಲಿ ನಡೆದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ತಂಡ ಡೆಲ್ಲಿ ತಂಡಕ್ಕೆ ಬ್ಯಾಟಿಂಗ್ ಗೆ ಆಹ್ವಾನಿಸಿತು. ಸಾಧಾರಣ ಗತಿಯಲ್ಲಿ ರನ್ ಪೇರಿಸಿದ ಡೆಲ್ಲಿ ತಂಡ ಅಂತಿಮವಾಗಿ 20 ಓವರ್ ಗಳಲ್ಲಿ 9 ವಿಕೆಟ್ ಗಳ ನಷ್ಟಕ್ಕೆ, 147 ರನ್ ಗಳನ್ನು ಪೇರಿಸಲಷ್ಟೇ ಶಕ್ತವಾಯಿತು.
ಈ ಸಾಧಾರಣಾ ಮೊತ್ತದ ಗುರಿ ಬೆನ್ನಟ್ಟಿದ ಅನುಭವಿ ಚೆನ್ನೈ ತಂಡಕ್ಕೆ ಆರಂಭಿಕರು ನೆರವಾದರು. ಡ್ಯುಪ್ಲೆಸಿ ಹಾಗೂ ಶಾನ್ ವಾಟ್ಸನ್ ತಲಾ 50 ರನ್ ಗಳನ್ನು ಸಿಡಿಸಿ ಮಿಂಚಿದರು. ಬಳಿಕ ಅಂಬಾಟಿ ರಾಯುಡ್ ಚೆನ್ನೈ ತಂಡದ ಧೋನಿಯನ್ನು ತಡ ಸೇರಿಸಿದರು. ಅಂತಿಮವಾಗಿ 19 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿ ಗೆಲುವು ದಾಖಲಿಸುವ ಮೂಲಕ ಫೈನಲ್ ಗೆ ಎಂಟ್ರಿಕೊಟ್ಟಿತು.
ಮೇ 12ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮುಂಬೈ ಹಾಗೂ ಚೆನ್ನೈ ಮುಖಾಮುಖಿಯಾಗಲಿದೆ.