ವಿಶಾಖ ಪಟ್ಟಣ, ಮೇ 11 (Daijiworld News/SM): ಡೆಲ್ಲಿ ಕ್ಯಾಪಿಟಲ್ ವಿರುದ್ಧ ನಡೆದ ಎರಡನೇ ಕ್ವಾಲಿಫೈಯರ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವು ಸಾಧಿಸಿ ಫೈನಲ್ ಗೆ ಎಂಟ್ರಿ ನೀಡಿದೆ. ಸಿಎಸ್ ಕೆ ತಂಡದ ಹರ್ಭಜನ್ ಸಿಂಗ್ ಈ ಪಂದ್ಯದಲ್ಲಿ ಸಾಧನೆಗೈದಿದ್ದಾರೆ.
ಹರ್ಭಜನ್ಸಿಂಗ್ ಐಪಿಎಲ್ ಇತಿಹಾಸದಲ್ಲಿ 150 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ನ ಶೆರ್ಫಾನ್ ರುದರ್ಫೋರ್ಡ್ ವಿಕೆಟ್ ಉರುಳಿಸಿ ಈ ಸಾಧನೆಗೈದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ 150 ವಿಕೆಟ್ ಪಡೆದ 4ನೇ ಬೌಲರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಹರಭಜನ್ ಸಿಂಗ್ಗೂ ಮೊದಲು ಮುಂಬೈ ಇಂಡಿಯನ್ಸ್ ಲಸಿತ್ ಮಲಿಂಗಾ 169(121 ಪಂದ್ಯ), ಅಮಿತ್ ಮಿಶ್ರಾ 157(147), ಕೆಕೆಆರ್ನ ಪಿಯುಸ್ ಚಾವ್ಲಾ 150(157) ವಿಕೆಟ್ ಪಡೆದಿದ್ದಾರೆ.ಹರ್ಭಜನ್ ಸಿಂಗ್ ಈ ಟೂರ್ನಿಯಲ್ಲಿ 10 ಪಂದ್ಯಗಳಿಂದ 16 ವಿಕೆಟ್ ಪಡೆದು ಚೆನ್ನೈ ಸೂಪರ್ಕಿಂಗ್ಸ್ ಪರ ಹೆಚ್ಚು ವಿಕೆಟ್ ಪಡೆದ 3 ನೇ ಬೌಲರ್ ಎನಿಸಿದರು.