ನ್ಯೂಯಾರ್ಕ್, ಜೂ. 05(DaijiworldNews/AK): ಟಿ20 ವಿಶ್ವಕಪ್ ಟೂರ್ನಿಯಲ್ಲಿ ಎ ಗುಂಪಿನಲ್ಲಿರುವ ಭಾರತ ತಂಡವು ಇಂದು ತನ್ನ ಮೊದಲ ಪಂದ್ಯವನ್ನು ಆಡಲಿದ್ದು, ಐರ್ಲೆಂಡ್ ಬಳಗವನ್ನು ಎದುರಿಸಲಿದೆ.
ತಂಡವು ಸ್ಪಿನ್ ಶಕ್ತಿಯೊಂದಿಗೆ ಕಣಕ್ಕಿಳಿಯುತ್ತಿದ್ದು, ಟೂರ್ನಿಯಲ್ಲಿ ಇದುವರೆಗೆ ನಡೆದ ಪಂದ್ಯಗಳಲ್ಲಿ ಬ್ಯಾಟರ್ಸ್ಗಳ ರನ್ಗಳ ಸುರಿಮಳೆ ಹರಿಸಲು ಸಾಧ್ಯವಾಗಿಲ್ಲ. ಹೊಸ ಪಿಚ್ಗಳು ಇದಕ್ಕೆ ಆಸ್ಪದ ಕೊಡುತ್ತಿಲ್ಲ ವೆಂದೇ ಹೇಳಬಹುದು.
37 ವರ್ಷದ ರೋಹಿತ್ ಅವರಿಗೆ ಇದು ಬಹುತೇಕ ಕೊನೆಯ ವಿಶ್ವಕಪ್ ಟೂರ್ನಿಯಾಗಲಿದೆ. ಗೆಲುವಿನೊಂದಿಗೆ ವೃತ್ತಿಜೀವನಕ್ಕೆ ವಿದಾಯ ಹೇಳುವ ಸಾಧ್ಯತೆ ಇದೆ.ಅನುಭವ ಮತ್ತು ಸಾಮರ್ಥದಲ್ಲಿ ಭಾರತ ತಂಡವು ಐರ್ಲೆಂಡ್ಗಿಂತಲೂ ಬಲಶಾಲಿಯಾಗಿದೆ. ಆದರೆ ಜಯಿಸುವ ಒತ್ತಡವೂ ರೋ ಹಿತ್ ಶರ್ಮಾ ಬಳಗಕ್ಕೆ ಇದೆ.
ಐರ್ಲೆಂಡ್ ಮೊದಲಿನಿಂದಲೂ ತನ್ನ ದಿಟ್ಟ ಆಟಕ್ಕೆ ಹೆಸರಾಗಿದೆ. ಐರ್ಲೆಂಡ್ ತಂಡದಲ್ಲಿ ಪಾಲ್ ಸ್ಟರ್ಲಿಂಗ್, ಜೋ ಷ್ ಲಿಟಲ್, ಹ್ಯಾರಿ ಟೆಕ್ಟರ್, ಆ್ಯಂಡಿ ಬಾಲ್ಬಿರಿನಿ ಅವರು ಭಾರತಕ್ಕೆ ದಿಟ್ಟ ಸವಾಲೊಡ್ಡಬಲ್ಲ ಆಟಗಾರರಾಗಿದ್ದಾರೆ.
ಭಾರತ ತಂಡಕ್ಕೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಆದರೆ ಕೊಹ್ಲಿ ಮೂರು ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬರುವುದಾದರೆ ಯಶಸ್ವಿ ಜೈಸ್ವಾಲ್ ಅವರಿಗೆ ರೋಹಿತ್ ಜೊತೆಗೆ ಇನಿಂಗ್ಸ್ ಆರಂಭಿಸುವ ಅವಕಾಶ ಸಿಗಬಹುದು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಸೂರ್ಯ ಕುಮಾರ್ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂ ಡ್ಯ ಹಾಗೂ ಶಿವಂ ದುಬೆ ಅವರಿದ್ದಾರೆ.ಇನ್ನು ಬೌಲರ್ಗಳಾದ ಜಸ್ಪ್ರೀ ತ್ ಬೂಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ಅರ್ಷ ದೀ ಪ್ ಸಿಂಗ್ ಅವರ ಮೇಲೆ ನಿರೀಕ್ಷೆ ಇದೆ.