ನ್ಯೂಯಾರ್ಕ್, ಜೂ. 06(DaijiworldNews/AK): ಐಸಿಸಿ ಟ್ವೆಂ ಟಿ-20 ವಿಶ್ವಕಪ್ ಟೂರ್ನಿ ಯಲ್ಲಿ ತನ್ನ ಮೊದಲ ಪ ದ್ಯದಲ್ಲಿ ಐರ್ಲೆಂ ಡ್ ವಿರುದ್ಧ ಎಂಟು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಟೀಂ ಇಂಡಿಯಾಕ್ಕೆ ಆರಂಭದಲ್ಲೇ ಶುಭ ಸಿಕ್ಕಿದೆ.
ಪಂದ್ಯದಲ್ಲಿ ತಂಡದ ನಾಯಕನ ರೋ ಹಿತ್ ಶರ್ಮಾ ಆಕರ್ಷಕ ಅರ್ಧ ಶತಕ ಗಳಿಸಿ ಗಮನ ಸೆಳೆದಿದ್ದಾರೆ. ರೋಹಿತ್ 37 ಎಸೆತಗಳಲ್ಲಿ 52 ರನ್ ಗಳಿಸಿ (3 ಸಿಕ್ಸರ್, 4 ಬೌಂ ಡರಿ) ನಿರ್ಗಮಿಸಿದರು. 98 ರನ್ಗಳ ಸುಲಭ ಗುರಿ ಬೆನ್ನಟ್ಟಿದ ಭಾರತ 12.2 ಓವರ್ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿತ್ತು.
ಇನ್ನು ಅಂತರರಾಷ್ಟ್ರೀ ಯ ಕ್ರಿಕೆಟ್ನಲ್ಲಿ 600 ಸಿಕ್ಸ್ ಹೊಡೆದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಭಾಜನರಾಗಿದ್ದಾರೆ. ಐರ್ಲೆಂಡ್ ವಿರುದ್ಧದ
ಪಂದ್ಯದಲ್ಲಿ ರೋಹಿತ್ ಈ ದಾಖಲೆ ಬರೆದಿದ್ದಾರೆ.ಅಂತರರಾಷ್ಟ್ರೀ ಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಗಳಿಸಿದ ಬ್ಯಾಟ್ಸ್ ಮ್ಯಾನ್ ಗಳಾದ ರೋ ಹಿತ್ ಶರ್ಮಾ - 600,ಕ್ರಿಸ್ ಗೇ ಲ್- 553, ಶಾಹೀ ದ್ ಅಫ್ರಿದಿ- 476,ಬ್ರೆಂಡನ್ ಮೆಕಲಮ್- 398, ಮಾರ್ಟಿ ನ್ ಗಪ್ಟಿಲ್ -383.
ರೋಹಿತ್ ನಾಯಕತ್ವದಲ್ಲಿ ಭಾರತಕ್ಕೆ ಒಲಿದಿರುವ 42ನೇ ಗೆಲುವು ಆಗಿದೆ. ಇದರೊಂದಿಗೆ ಭಾರತದ ಅತ್ಯಂತ ಯಶಸ್ವಿ ಟಿ20 ನಾಯಕ ಎನಿಸಿದ್ದಾರೆ. ಆಮೂಲಕ
ಮಾಜಿ ನಾಯಕ ಮಹೇಂದ್ರ ಸಿಂಗ್ ದಾಖಲೆಯನ್ನು ಮುರಿದಿದ್ದಾರೆ.