ನ್ಯೂಯಾರ್ಕ್ , ಜೂ. 11 (DajiworldNews/AK): ಭಾರತ ವಿರುದ್ಧದ ಸೋಲಿನ ಬಳಿಕ ಪಾಕಿಸ್ತಾನ ತಂಡ ಮಂಗಳವಾರ ಟಿ20 ವಿಶ್ವಕಪ್ ‘ಎ’ ಗುಂಪಿನ ಲೀ ಗ್ ಪಂದ್ಯದಲ್ಲಿ ಕೆನಡಾ ತಂಡವನ್ನು ಎದುರಿಸಲಿದೆ. ಪಾಕಿಸ್ತಾನ ಸುಲಭ ಗೆಲುವಿನ ನಿರೀಕ್ಷೆಯಲ್ಲಿದೆ.
ಸೂಪರ್ ಓವರ್ನಲ್ಲಿ ಅಮೆರಿಕಕ್ಕೆ ಮಣಿದ ಪಾಕಿಸ್ತಾನ, ಅಲ್ಪ ಸ್ಕೋ ರುಗಳನ್ನು ಕಂಡ ಎರಡನೇ ಪಂದ್ಯದಲ್ಲಿ ಎದುರಾಳಿ ಭಾರತ ಎದುರು ಭಾನುವಾರ ಆರು ರನ್ಗಳ ಸೋಲಾಯಿತು.
ಕೆನಡಾ ಮತ್ತು ಐರ್ಲೆಂಡ್ ಎದುರು ಉಳಿದೆರಡು ಪಂದ್ಯಗಳಲ್ಲಿ ದೊಡ್ಡ ಗೆಲುವಿನ ಜೊತೆಗೆ, ಅಮೆರಿಕ ತಂಡವು ತನ್ನ ಉಳಿದೆರಡು ಪಂದ್ಯಗಳಲ್ಲಿ ಭಾರತ ಮತ್ತು ಐರ್ಲೆಂಡ್ ಎದುರು ಸೋತರಷ್ಟೇ ಪಾಕಿಸ್ತಾನದ ಸೂಪರ್ ಎಂಟು ಅವಕಾಶಕ್ಕೆ ಬಲ ಬರಲಿದೆ.
ಸದ್ಯ ಎರಡು ಪಂದ್ಯಗಳ ನಂತರ ಅಮೆರಿಕದ ರನ್ ರೇಟ್ +0.626 ಆಗಿದ್ದು,ಪಾಕಿಸ್ತಾನ ರನ್ ದರ ನಿರಾಶಾದಾಯಕ –0.150 ಆಗಿದೆ. ಹೀಗಾಗಿ ಸಮಾನ ಪಾಯಿಂಟ್ಸ್ ಗಳಿಸಿದಲ್ಲಿ ರನ್ ರೇಟ್ ನಿರ್ಣಾಯಕವಾಗುವ ಕಾರಣ ಪಾಕ್ ದೊಡ್ಡ ಅಂತರದ ಗೆಲುವುಗಳು ಅನಿವಾರ್ಯ .2009ರ ಚಾಂಪಿಯನ್ ಪಾಕಿಸ್ತಾನ ಈಗ ಮೊದಲಿನ ಶಕ್ತ ತಂಡವಾಗಿ ಕಾಣುತ್ತಿಲ್ಲ. ಇತ್ತೀ ಚೆಗಷ್ಟೇ ಬಾಬರ್ ಆಜಂ ನಾಯಕತ್ವ ವಹಿಸಿಕೊಂಡಿದ್ದಾರೆ.