ಫ್ಲೋರಿಡಾ, ಜೂ. 18(DaijiworldNews/AK): ಟಿ20 ವಿಶ್ವಕಪ್ನಲ್ಲಿ ಭಾಗವಹಿಸಿದ್ದ 20 ತಂಡಗಳಲ್ಲಿ 8 ತಂಡಗಳು ಸೂಪರ್-8ಗೆ ಅರ್ಹತೆ ಪಡೆದಿವೆ. ಇಂದು (ಜೂ.17) ಬಾಂಗ್ಲಾದೇಶ ಮತ್ತು ನೇಪಾಳ ನಡುವೆ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ 21 ರನ್ಗಳಿಂದ ಎದುರಾಳಿ ನೇಪಾಳವನ್ನು ಸೋಲಿಸಿ ಸೂಪರ್-8 ಸುತ್ತಿಗೆ ಅರ್ಹತೆ ಪಡೆದುಕೊಂಡಿತು.
ಇದೀಗ ಸೂಪರ್-8 ಆಡಲಿರುವ ಎಂಟು ತಂಡಗಳು ಖಚಿತವಾಗಿದೆ. ಈ ತಂಡಗಳನ್ನು ತಲಾ 4ರಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಜೂ.19 ರಿಂದ ಸೂಪರ್-8 ಪಂದ್ಯಗಳು ವೆಸ್ಟ್ ಇಂಡೀಸ್ನಲ್ಲಿ ಆರಂಭವಾಗಲಿದೆ.
ಸೂಪರ್-8 ತಲುಪಿದ ತಂಡಗಳು ಹೀಗೆವೆ:
ಎ ಗುಂಪು- ಭಾರತ, ಯುಎಸ್ಎ
ಬಿ ಗುಂಪು- ಆಸ್ಟ್ರೇಲಿಯಾ, ಇಂಗ್ಲೆಂಡ್
ಸಿ ಗುಂಪು:-ಅಫ್ಘಾನಿಸ್ತಾನ, ವೆಸ್ಟ್ ಇಂಡೀಸ್
ಡಿ ಗುಂಪು-ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ
ಈ ಬಾರಿ ವಿಶ್ವಕಪ್ನಲ್ಲಿ ಪಾಲ್ಗೊಂಡ 20 ತಂಡಗಳ ಪೈಕಿ 8 ತಂಡಗಳು ಸೂಪರ್-8ಗೆ ಅರ್ಹತೆ ಪಡೆದುಕೊಂಡರೆ, 12 ತಂಡಗಳ ಟಿ20 ವಿಶ್ವಕಪ್ ಪಯಣ ಕೊನೆಯಾಗಿದೆ. ಸದ್ಯ 12 ತಂಡಗಳಲ್ಲಿ ಪಾಕಿಸ್ತಾನ, ನ್ಯೂಜಿಲೆಂಡ್, ಪಪುವಾ ನ್ಯೂಗಿನಿಯಾ, ನಮೀಬಿಯಾ, ಐರ್ಲೆಂಡ್, ಕೆನಡಾ, ಓಮನ್, ಸ್ಕಾಟ್ಲೆಂಡ್, ಶ್ರೀಲಂಕಾ, ಉಗಾಂಡಾ, ನೇಪಾಳ ಮತ್ತು ನೆದಲ್ಯಾರ್ಂಡ್ಸ್ ತಂಡಗಳು ವಿಶ್ವಕಪ್ ನಿಂದ ಹೊರಬಿದ್ದಿವೆ.