ಹೈದರಾಬಾದ್, ಮೇ 13 (Daijiworld News/SM): 12ನೇ ಆವೃತ್ತಿಯ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಈಗಾಗಲೇ ಗೆದ್ದು ಬೀಗಿದೆ. ಕೊನೆಯ ಒಂದು ಎಸೆತದಲ್ಲಿ ಗೆಲುವಿಗೆ ಎರಡು ರನ್ಗಳ ಅವಶ್ಯಕತೆ ಚೆನ್ನೈ ತಂಡಕ್ಕಿತ್ತು. ಆದರೆ, ಮುಂಬೈ ತಂಡದ ಅಂತಿಮ ಗಳಿಗೆಯ ನಿರ್ಧಾರ ಅವರಿಗೆ ಗೆಲುವು ತಂದುಕೊಟ್ಟಿದೆ.
ಮಾಲಿಂಗ ಎಸೆದ ಚೆಂಡು ಶಾರ್ದೂಲ್ ಠಾಕೂರ್ನನ್ನು ಬಲಿ ಪಡೆಯಿತು. ಈ ಹಿನ್ನೆಲೆ ಅಂತಿಮ ಎಸೆತ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ, ಅದಕ್ಕೂ ಮುನ್ನ ರೋಹಿತ್ ಕೈಗೊಂಡ ಆ ಒಂದು ನಿರ್ಧಾರದಿಂದಾಗಿ ಮುಂಬೈ ತಂದೆ ಗೆಲುವು ಸಾಧಿಸಿತು.
ಶಾರ್ದೂಲ್ ಉತ್ತಮ ಆಟಗಾರ ಎನ್ನುವುದು ತಿಳಿದಿತ್ತು. ಬ್ಯಾಟ್ಸ್ಮನ್ ಮೈದಾನದ ಯಾವ ಭಾಗಕ್ಕೆ ಹೊಡೆಯಬಲ್ಲರು ಎನ್ನುವುದು ಅಂದಾಜಿಸಿದೆವು. ನಾನು ಹಾಗೂ ಮಾಲಿಂಗ ನಿಧಾನವಾದ ಎಸೆತದ ನಿರ್ಧಾರಕ್ಕೆ ಬಂದೆವು. ಈ ಮೂಲಕ ಸ್ಟ್ರೈಕ್ನಲ್ಲಿದ್ದ ಶಾರ್ದೂಲ್ರನ್ನು ಔಟ್ ಮಾಡುವುದು ನಮ್ಮ ಗುರಿಯಾಗಿತ್ತು" ಎಂದು ಕೊನೆ ಎಸೆತದ ಹಿಂದಿನ ಕ್ಷಣದ ಬಗ್ಗೆ ರೋಹಿತ್ ಸಂತಸ ವ್ಯಕ್ತಪಡಿಸಿದ್ದಾರೆ.
ರೋಹಿತ್ ಶರ್ಮಾರ ನಿರ್ಧಾರ ಫಲಿಸಿದ್ದು, ತಂಡ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿ ಸಾಧಿಸಿತು.