ನವದೆಹಲಿ, ಜೂ.23(DaijiworldNews/AA): ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (ಎನ್ಎಡಿಎ) ಕುಸ್ತಿಪಟು ಭಜರಂಗ್ ಪುನಿಯಾ ಅವರನ್ನು ಮತ್ತೆ ಅಮಾನತುಗೊಳಿಸಿದೆ.
ಮಾರ್ಚ್ 10 ರಂದು ಸೋನಿಪತ್ನಲ್ಲಿ ನಡೆದ ಟ್ರಯಲ್ಸ್ನಲ್ಲಿ ಆಯ್ಕೆಯಾದ ಬಳಿಕ ಭಜರಂಗ್ ಪುನಿಯಾ ಅವರು ಮೂತ್ರದ ಮಾದರಿಯನ್ನು ನೀಡಿರಲಿಲ್ಲ. ಭಜರಂಗ್ ಪುನಿಯಾ ಅವರು ಮೂತ್ರದ ಮಾದರಿಯನ್ನು ನೀಡದ ಹಿನ್ನೆಲೆ ಭವಿಷ್ಯದ ಯಾವುದೇ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸದಂತೆ ಅಮಾನತುಗೊಳಿಸುವ ಆದೇಶವನ್ನು ನಾಡಾ ಹೊರಡಿಸಿದೆ.
ಈ ಅಮಾನತು ನಿರ್ಧಾರ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುವ ಭಜರಂಗ್ ಪುನಿಯಾ ಅವರ ಪ್ರಯತ್ನಕ್ಕೆ ಹಿನ್ನಡೆ ಉಂಟಾಗಲಿದೆ.