ನವದೆಹಲಿ, ಜೂ 27 (DaijiworldNews/ AK):ಟಿ20 ವಿಶ್ವಕಪ್ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಸೌತ್ ಆಫ್ರಿಕಾ ತಂಡ ಫೈನಲ್ಗೆ ಪ್ರವೇಶಿಸಿದೆ.
ಟ್ರಿನಿಡಾಡ್ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ತಂಡ 56 ರನ್ಗಳಿಗೆ ಆಲೌಟ್ ಆದರೆ, ಸೌತ್ ಆಫ್ರಿಕಾ ತಂಡವು ಈ ಗುರಿಯನ್ನು 8.5 ಓವರ್ಗಳಲ್ಲಿ ಚೇಸ್ ಮಾಡಿತು. ಈ ಮೂಲಕ 9 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿ ಮಾರ್ಕ್ರಾಮ್ ಪಡೆ ಫೈನಲ್ಗೆ ಪ್ರವೇಶಿಸಿದೆ.
ಈ ಗೆಲುವಿನೊಂದಿಗೆ ಸತತ ಗೆಲುವುಗಳ ಮೂಲಕ ಸೌತ್ ಆಫ್ರಿಕಾ ತಂಡವು ಟಿ20 ವಿಶ್ವಕಪ್ನಲ್ಲಿ ಹೊಸ ಇತಿಹಾಸವನ್ನು ಬರೆದಿದೆ. ಟಿ20 ವಿಶ್ವಕಪ್ ಇತಿಹಾಸದ ಆವೃತ್ತಿಯೊಂದರಲ್ಲಿ ಸತತ ಗೆಲುವು ಸಾಧಿಸಿ ಫೈನಲ್ಗೆ ಪ್ರವೇಶಿಸಿದ ಮೊದಲ ತಂಡವೆಂಬ ಕೀರ್ತಿ ಸೌತ್ ಆಫ್ರಿಕಾ ಪಾಲಾಗಿದೆ.
ಈ ಬಾರಿಯ ಟಿ20 ವಿಶ್ವಕಪ್ನಲ್ಲಿ 8 ಪಂದ್ಯಗಳನ್ನಾಡಿರುವ ಸೌತ್ ಆಫ್ರಿಕಾ ತಂಡವು ಒಂದೇ ಒಂದು ಸೋಲನುಭವಿಸಿಲ್ಲ. ಈ ಮೂಲಕ ಸತತ ಎಂಟು ಗೆಲುವುಗಳೊಂದಿಗೆ ಆಫ್ರಿಕನ್ನರು ಇದೀಗ ಫೈನಲ್ ಸುತ್ತಿಗೆ ಪ್ರವೇಶಿಸಿದೆ.ಅದರಂತೆ ಫೈನಲ್ ಪಂದ್ಯದಲ್ಲಿ ಗೆಲ್ಲುವ ಮೂಲಕ ಸೌತ್ ಆಫ್ರಿಕಾ ಹೊಸ ಇತಿಹಾಸ ನಿರ್ಮಿಸಲಿದೆಯಾ ಕಾದು ನೋಡಬೇಕಿದೆ.