ಲಂಡನ್, ಜು. 13(DaijiworldNews/AA): ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೇಮ್ಸ್ ಅ್ಯಂಡರ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.
2002 ರಲ್ಲಿ ಇಂಟರ್ನ್ಯಾಷನಲ್ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದ ಅ್ಯಂಡರ್ಸನ್ ಇದೀಗ 22 ವರ್ಷಗಳ ಬಳಿಕ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಜೇಮ್ಸ್ ಅ್ಯಂಡರ್ಸನ್ ಅವರು ಕೆಲ ಪಂದ್ಯಗಳನ್ನ ಆಡಿದ್ದರೆ ಮೂರು ವಿಶ್ವ ದಾಖಲೆಗಳನ್ನು ತಮ್ಮದಾಗಿಸಿಕೊಳ್ಳಬಹುದಿತ್ತು. ಆದರೆ ಅದಕ್ಕೂ ಮುನ್ನವೇ ಜೇಮ್ಸ್ ಅ್ಯಂಡರ್ಸನ್ ಅವರು ನಿವೃತ್ತಿ ಘೋಷಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ಪಂದ್ಯಗಳನ್ನಾಡಿದ ವಿಶ್ವ ದಾಖಲೆ ಬರೆಯಲು ಜೇಮ್ಸ್ ಅ್ಯಂಡರ್ಸನ್ ಅವರಿಗೆ ಅವಕಾಶವಿತ್ತು. ಈ ದಾಖಲೆ ಬರೆಯಲು ಕೇವಲ 12 ಪಂದ್ಯಗಳ ಅವಶ್ಯಕತೆಯಿತ್ತು. ಜೇಮ್ಸ್ ಅ್ಯಂಡರ್ಸನ್ ಅವರಿಗೆ ಆಸ್ಟ್ರೇಲಿಯಾ ಲೆಜೆಂಡ್ ಶೇನ್ ವಾರ್ನ್ ಅವರ ವಿಶ್ವ ದಾಖಲೆ ಮುರಿಯುವ ಉತ್ತಮ ಅವಕಾಶವಿತ್ತು. ಈಗಾಗಲೇ 700 ವಿಕೆಟ್ ಪಡೆದಿದ್ದ ಅ್ಯಂಡರ್ಸನ್ ಕೇವಲ 4 ವಿಕೆಟ್ ಕಬಳಿಸಿದ್ದರೆ, ವಾರ್ನರ್ ಅವರ ದಾಖಲೆ ಮುರಿಯಬಹುದಿತ್ತು. ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸಾವಿರ ವಿಕೆಟ್ ಪೂರೈಸಲು ಜೇಮ್ಸ್ ಅ್ಯಂಡರ್ಸನ್ಗೆ ಬೇಕಿದದ್ದು ಕೇವಲ 9 ವಿಕೆಟ್ ಮಾತ್ರ. ಅವರು 9 ವಿಕೆಟ್ ಪಡೆದಿದ್ದರೆ, ಅಂತಾರಾಷ್ಟ್ರೀಯ ಕ್ರಿಕೆಟ್ಸಾ ನಲ್ಲಿ ವಿರ ವಿಕೆಟ್ ಪಡೆದ ವಿಶ್ವದ ಮೊದಲ ಬೌಲರ್ ಎನಿಸಿಕೊಳ್ಳುತ್ತಿದ್ದರು.
ಜೇಮ್ಸ್ ಅ್ಯಂಡರ್ಸನ್ ಅವರು ಇಂಗ್ಲೆಂಡ್ ಪರ 188 ಟೆಸ್ಟ್ ಪಂದ್ಯಗಳನ್ನಾಡಿದ್ದು, ಒಟ್ಟು 704 ವಿಕೆಟ್ ಉರುಳಿಸಿದ್ದಾರೆ. ಹಾಗೆಯೇ 194 ಏಕದಿನ ಪಂದ್ಯಗಳಿಂದ 269 ವಿಕೆಟ್ ಪಡೆದಿದ್ದಾರೆ. ಇನ್ನು 19 ಟಿ20 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದ 19 ವಿಕೆಟ್ ಪಡೆದಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತ್ಯಧಿಕ ವಿಕೆಟ್ ಪಡೆದ ವೇಗದ ಬೌಲರ್ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.