ಮುಂಬೈ, ಜು. 18(DaijiworldNews/AK):ಮಹಿಳಾ ಏಷ್ಯಾಕಪ್ ಟಿ20 ಟೂರ್ನಿಗೆ ನಾಳೆ (ಜುಲೈ.19) ಚಾಲನೆ ದೊರೆಯಲಿದೆ.ಶ್ರೀಲಂಕಾದಲ್ಲಿ ನಡೆಯಲಿರುವ ಈ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಯುಎಇ ಮತ್ತು ನೇಪಾಳ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಇದೇ ದಿನ ನಡೆಯಲಿರುವ ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಕಣಕ್ಕಿಳಿಯಲಿದೆ.
ಟಿ20 ಕ್ರಿಕೆಟ್ನಲ್ಲಿ ಭಾರತ ಮತ್ತು ಪಾಕಿಸ್ತಾನ್ ಮಹಿಳಾ ತಂಡಗಳು ಈವರೆಗೆ 11 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಭಾರತ ತಂಡವು 10 ಬಾರಿ ಜಯ ಸಾಧಿಸಿದರೆ, ಪಾಕಿಸ್ತಾನ್ 3 ಬಾರಿ ಗೆಲುವು ದಾಖಲಿಸಿದೆ. ಭಾರತ ಮತ್ತು ಪಾಕಿಸ್ತಾನ್ ಮಹಿಳಾ ತಂಡಗಳ ನಡುವಣ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಶುರುವಾಗಲಿದೆ.ಇಂಡೊ ಮತ್ತು ಪಾಕ್ ನಡುವಣ ಪಂದ್ಯಕ್ಕೆ ಶ್ರೀಲಂಕಾದ ದಂಬುಲ್ಲಾದ ರಂಗಿರಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಭಾರತ ತಂಡ: ಹರ್ಮನ್ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಉಮಾ ಚೆಟ್ರಿ (ವಿಕೆಟ್ ಕೀಪರ್), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ಜೆಮಿಮಾ ರೊಡ್ರಿಗಸ್, ರೇಣುಕಾ ಠಾಕೂರ್, ದಯಾಲನ್ ಹೇಮಲತಾ, ಆಶಾ ಶೋಭಾನಾ, ರಾಧಾ ಯಾದವ್, ಶ್ರೇಯಾಂಕಾ ಪಾಟೀಲ್, ಸಜನಾ ಸಜೀವನ್.
ಪಾಕಿಸ್ತಾನ್ ತಂಡ: ನಿದಾ ದಾರ್ (ನಾಯಕಿ), ಇರಾಮ್ ಜಾವೇದ್, ಸಾದಿಯಾ ಇಕ್ಬಾಲ್, ಅಲಿಯಾ ರಿಯಾಜ್, ಡಯಾನಾ ಬೇಗ್, ಫಾತಿಮಾ ಸನಾ, ಗುಲ್ ಫಿರೋಜಾ, ಮುನೀಬಾ ಅಲಿ, ಸಿದ್ರಾ ಅಮೀನ್, ನಜಿಹಾ ಅಲ್ವಿ, ಸೈಯದಾ ಅರೂಬ್ ಶಾ, ನಶ್ರಾ ಸುಂಧು, ತಸ್ಮಿಯಾ ರುಬಾಬ್, ಒಮೈಮಾ ಸೊಹೈಲ್, ತುಬಾ ಹಸನ್ .
ಭಾರತದ ಪಂದ್ಯಗಳ ವೇಳಾಪಟ್ಟಿ ಹೀಗಿದೆ ಜುಲೈ 19: ಭಾರತ vs ಪಾಕಿಸ್ತಾನ (7 PM IST), ಜುಲೈ 21: ಭಾರತ vs ಯುಎಇ (2 PM IST), ಜುಲೈ 23: ಭಾರತ vs ನೇಪಾಳ (7 PM IST) ನಡೆಯಲಿದೆ