ನವದೆಹಲಿ, ಜು 22 (DaijiworldNews/ AK): ಭಾರತೀಯ ಹಾಕಿ ತಂಡದ ಹಿರಿಯ ಆಟಗಾರ, ಗೋಲ್ ಕೀಪರ್ ಪಿಆರ್ ಶ್ರೀ ಜೇಶ್ ಅವರು ಅಂತಾರಾಷ್ಟ್ರೀ ಯ ಹಾಕಿಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಪ್ಯಾರಿಸ್ ಒಲಿಂಪಿಕ್ಸ್ ಅವರ ಕೊನೆಯ ಅಂತಾರಾಷ್ಟ್ರೀ ಯ ಕೂಟವಾಗಿರಲಿದೆ.
2006ರಲ್ಲಿ ಭಾರತೀಯ ತಂಡಕ್ಕೆ ಪದಾರ್ಪಣೆ ಮಾಡಿದ ಶ್ರೀ ಜೇಶ್ ಅವರು ನಾಲ್ಕನೇ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಸಿದ್ದರಾಗಿದ್ದಾರೆ. 2020ರ ಟೊಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಕಂಚಿನ ಪದಕ ಗೆದ್ದುಕೊಂಡಿತ್ತು. ಈ ಬಾರಿಯೂ ಮೆಡಲ್ ನೊಂದಿಗೆ ವೃತ್ತಿಜೀವನ ಅಂತ್ಯಗೊಳಿಸಲು ಶ್ರೀಜಿತ್ ಮುಂದಾಗಿದ್ದಾರೆ.
ಜಿ ವಿ ರಾಜಾ ಸ್ಪೋ ರ್ಟ್ಸ್ ಸ್ಕೂಲ್ ನಿಂದ ಆರಂಭವಾದ ಶ್ರೀಜೇಶ್ ಕ್ರೀಡಾ ಪಯಣವು ಹಲವು ಸಾಧನೆಯನ್ನ ಮಾಡಿ ಯಶಸ್ಸು ಪಡೆದಿದ್ದಾರೆ.. ಅಲ್ಲದೇ ನನ್ನ ಮೊದಲ ಕಿಟ್ ಖರೀದಿಸಲು ತಂದೆ ನಮ್ಮ ಹಸುವನ್ನು ಮಾರಾಟ ಮಾಡಿದ್ದರು ಎಂದು ಶ್ರೀ ಜೇಶ್ ನೆನಪಿಸಿಕೊಂಡರು.
ಒಲಿಂಪಿಕ್ ಮೆಡಲ್ ಜೊತೆಗೆ ಏಷ್ಯನ್ ಚಾಂಪಿಯನ್ಸ್ ಟ್ರೋ ಫಿ ಗೆಲುವು, ಏಷ್ಯನ್ ಗೇಮ್ಸ್ ಗೋ ಲ್ಡ್ ಮೆಡಲ್ ಗಳು ಶ್ರೀ ಜೇಶ್ ಅವರ ಅಂತಾರಾಷ್ಟ್ರೀ ಯ ವೃತ್ತಿಜೀವನದ ಸಾಧನೆಗಳು. ಭಾರತೀಯ ತಂಡದ ನಾಯಕನಾಗಿ ಅವರು ಒಲಿಂಪಿಕ್ಸ್ ನಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. 2020ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಶ್ರೀ ಜೇಶ್ ಅವರಿಗೆ ಕಂಚಿನ ಪದಕದ ಜೊತೆಗೆ ವಿಶ್ವದ ಅತ್ಯುತ್ತಮ ಗೋಲ್ ಕೀಪರ್ ಪಟ್ಟವನ್ನು ಪಡೆದಿದ್ದಾರೆ.