ಬೆಂಗಳೂರು, 25 (DaijiworldNews/ AK): ಕೆಎಸ್ಎ ಮತ್ತು ಶ್ರೀ ರಾಮ್ ಕ್ಯಾಪಿಟಲ್ಸ್ ಸಹಭಾಗಿತ್ವದಲ್ಲಿ ನಡೆಯಲಿರುವ ಮಹಾರಾಜ ಟ್ರೋಫಿ ಟಿ20 ಪಂದ್ಯಾವಳಿಯ 3ನೇ ಆವೃತ್ತಿಗಾಗಿ, ಗುರುವಾರ ಆಟಗಾರರ ಹರಾಜು ನಡೆದಿದೆ.
ಇದೇ ಮೊದಲ ಬಾರಿಗೆ ಹರಾಜಿಗೆ ಬಂದಿದ್ದ ಟೀಂ ಇಂಡಿಯಾ ಮಾಜಿ ಕೋಚ್ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಆಯ್ಕೆಯಾಗಿದ್ದಾರೆ. ಆಲ್ ರೌಂಡರ್ ಆಗಿರುವ ಸಮಿತ್ ದ್ರಾವಿಡ್ ಅವರು ಮೈಸೂರು ವಾರಿಯರ್ಸ್ ತಂಡದ ಪಾಲಾಗಿದ್ದಾರೆ.
ಬೆಂಗಳೂರು ಬ್ಲಾಸ್ಟರ್, ಗುಲ್ಬರ್ಗಾ ಮಿಸ್ಟಿಕ್ಸ್, ಹುಬ್ಬಳ್ಳಿ ಟೈಗರ್ಸ್, ಮಂಗಳೂರು ಡ್ರ್ಯಾ ಗನ್ಸ್, ಮೈಸೂರು ವಾರಿಯರ್, ಶಿವಮೊಗ್ಗ ಲಯನ್ಸ್ ತಂಡಗಳು ಆಟಗಾರರನ್ನು ಆರಿಸಿವೆ. ಪಂದ್ಯಾವಳಿ ಆ.15- ಸೆ.1 ರವರೆಗೆ ನಡೆಯಲಿದೆ.
ಆಲ್ ರೌಂಡರ್ ಚೇತನ್ ಎಲ್ಆರ್ ಇಂದಿನ ಹರಾಜಿನಲ್ಲಿ ಹೆಚ್ಚಿನ ತಂಡಗಳಲ್ಲಿ ಗಮನ ಸೆಳೆದರು. ಚೇತನ್ ಇಂದಿನ ಬಿಡ್ಡಿಂಗ್ ಪ್ರಕ್ರಿಯೆಯ ಅತ್ಯಂತ ದುಬಾರಿ ಖರೀದಿಯಾದರು. ಬೆಂಗಳೂರು ಬ್ಲಾಸ್ಟರ್ಸ್ತಂಡವು ರೂ 8.60 ಲಕ್ಷಕ್ಕೆ ಅವರನ್ನು ಖರೀದಿ ಮಾಡಿತು.ಅನುಭವಿ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರನ್ನು ಮಂಗಳೂರು ಡ್ರ್ಯಾ ಗನ್ಸ್ ತಂಡವು 7.60 ಲಕ್ಷ ರೂ ನೀಡಿ ಖರೀದಿ ಮಾಡಿತು.