ಪ್ಯಾರಿಸ್, ಜು.28(DaijiworldNews/AA): ಮಹತ್ವದ ಕ್ರೀಡಾಕೂಟವಾದ ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನ ಸಮಾರಂಭದಲ್ಲಿ ಭಾರತೀಯ ಕ್ರೀಡಾಪಟುಗಳಿಗೆ ವಿನ್ಯಾಸಕಾರ ತರುಣ್ ತಹಿಲಿಯಾನಿ ಅವರು ವಸ್ತ್ರ ವಿನ್ಯಾಸ ಮಾಡಿದ್ದರು. ಇದೀಗ ವಿನ್ಯಾಸಕಾರ ತರುಣ್ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಅಂಬಾನಿ ಮಗನ ಮದುವೆ ವಿಚಾರ ಬಂದಾಗ ನೀವು ಮಾಸ್ಟರ್ಪೀಸ್ ಆದ ಡ್ರೆಸ್ಗಳನ್ನು ವಿನ್ಯಾಸ ಮಾಡುತ್ತೀರಿ. ದೇಶದ ವಿಚಾರ ಬಂದಾಗ ಇಂಥ ಕೆಟ್ಟ ವಿನ್ಯಾಸದ ಡ್ರೆಸ್ ಮಾಡುತ್ತೀರಿ. ಭಾರತದ ಕ್ರೀಡಾಪಟುಗಳು ಧರಿಸಿದ್ದ ಸಮವಸ್ತ್ರಗಳು ಕಳೆಪೆ ಗುಣಮಟ್ಟದ್ದಾಗಿತ್ತು, ದೇಶಕ್ಕೆ ಅವಮಾನ ಮಾಡುವ ರೀತಿಯಂತಿತ್ತು ಎಂದು ನೆಟ್ಟಿಗರು ಟೀಕೆಗಳ ಸುರಿಮಳೆಗೈದಿದ್ದಾರೆ.
ಪಥಸಂಚಲನಕ್ಕೂ ಮುನ್ನ ಧ್ವಜಧಾರಿಗಳಾದ ಪಿವಿ.ವಿ ಸಿಂಧು ಮತ್ತು ಶರತ್ ಕಮಲ್ ಸೇರಿದಂತೆ ಹಲವು ಭಾರತೀಯ ಕ್ರೀಡಾಪಟುಗಳು ಕೇಸರಿ, ಬಿಳಿ, ಹಸಿರು ಬಣ್ಣಗಳಿಂದ ಕೂಡಿದ ಸಮವಸ್ತ್ರ ಧರಿಸಿದ್ದರು. ತಾವು ಧರಿಸಿದ್ದ ಸಮವಸ್ತ್ರದ ಫೋಟೋಗಳನ್ನು ಕೆಲ ಕ್ರೀಡಾಪಟುಗಳು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ಈ ಫೋಟೋ ಕಂಡ ನೆಟ್ಟಿಗರು ಭಾರತೀಯರ ಸಮವಸ್ತ್ರದ ವಿನ್ಯಾಸ ಕಳಪೆ ಗುಣಮಟ್ಟದ್ದಾಗಿತ್ತು ಎಂದು ಟೀಕೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸಮವಸ್ತ್ರ ವಿನ್ಯಾಸಗೊಳಿಸಿದ ತರುಣ್ ತಹಿಲಿಯಾನಿ ಅವರಿಗೆ ಹಿಗ್ಗಾಮುಗ್ಗಾ ಬೈದಿದ್ದಾರೆ.