ಪ್ಯಾರಿಸ್, ಆ.03(DaijiworldNews/AA): 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಎರಡು ಪದಕ ಗೆದ್ದು ದಾಖಲೆ ಬರೆದಿರುವ ಭಾರತದ ಮನು ಭಾಕರ್ಗೆ ಜಾಹೀರಾತು ಕಂಪೆನಿಗಳಿಂದ ಭಾರೀ ಆಫರ್ಗಳು ಬರುತ್ತಿದ್ದು, ಇದೀಗ ಬ್ರ್ಯಾಂಡ್ ಮೌಲ್ಯ 6 ಪಟ್ಟು ಹೆಚ್ಚಳವಾಗಿದೆ.
ಮನು ಭಾಕರ್ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿರುವಾಗಲೇ ಸುಮಾರು 40 ಜಾಹೀರಾತು ಕಂಪನಿಗಳು ಅವರನ್ನು ಸಂಪರ್ಕಿಸಿವೆ. ಈಗಾಗಲೇ ಕೋಟಿ ಕೋಟಿ ರೂ. ಮೌಲ್ಯದ ಒಂದೆರಡು ಒಪ್ಪಂದಗಳು ಕೂಡ ಒಪ್ಪಿಂಕೊಂಡಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ಗೂ ಮುನ್ನ 20-25 ಲಕ್ಷ ರೂ.ನಷ್ಟಿದ್ದ ಮನು ಭಾಕರ್ ಅವರ ಬ್ರ್ಯಾಂಡ್ ಮೌಲ್ಯವು ಈಗ 6-7 ಪಟ್ಟು ಮೌಲ್ಯ ಏರಿಕೆಯಾಗಿದೆ.
22 ವರ್ಷ ವಯಸ್ಸಿನಲ್ಲಿಯೇ ಒಲಿಂಪಿಕ್ಸ್ನಲ್ಲಿ ಎರಡು ಪದಕವನ್ನು ತಮ್ಮದಾಗಿಸಿಕೊಂಡಿರುವ ಮನು ಭಾಕರ್ ಅವರಿಗೆ 3ನೇ ಪದಕ ಕೊಂಚದಲ್ಲೇ ಕೈ ಜಾರಿದೆ. ಈ ಮಧ್ಯೆ ಕಳೆದ 2-3 ದಿನಗಳಲ್ಲಿ ಸುಮಾರು 40 ಬ್ರ್ಯಾಂಡ್ ಕಂಪನಿಗಳು ಅವರನ್ನ ಅರಸಿ ಬಂದಿದ್ದು, ಒಂದೆರಡು ಕಂಪನಿಗಳ ಒಪ್ಪಂದಗಳು ಮುಗಿದಿದೆ. ಉಳಿದ ಕಂಪನಿಗಳು ಅವರ ದೀರ್ಘಾವಧಿ ಹಾಗೂ ಅಲ್ಪಾವಧಿ ಕಾಂಟ್ರ್ಯಾಕ್ಟ್ಗೆ ಅನುಮೋದನೆ ಪಡೆಯಲು ಕಾಯುತ್ತಿವೆ ಎಂದು ತಿಳಿದುಬಂದಿದೆ.