ಕೊಲೊಂಬೊ, ಆ.05(DaijiworldNews/AK): ಶ್ರೀಲಂಕಾ ವಿರುದ್ದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡವು ಸೋಲು ಕಂಡಿದೆ. ಲೆಗ್ ಸ್ಪಿನ್ನರ್ ಜೆಫ್ರಿ ವಾಂಡೆರ್ಸೆ ಜಾಲಕ್ಕೆ ನಲುಗಿದ ಟೀಂ ಇಂಡಿಯಾ ಬ್ಯಾಟರ್ ಗಳು ಕೇವಲ 208 ರನ್ ಗಳಿಗೆ ಆಲೌಟಾಯಿತು. ಮೊದಲ ಪಂದ್ಯ ಟೈ ಆಗಿದ್ದರೆ, ಎರಡನೇ ಪಂದ್ಯದಲ್ಲಿ ಲಂಕಾ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಶ್ರೀ ಲಂಕಾ 240 ರನ್ ಗಳಿಸಿದರೆ ಭಾರತ 208 ರನ್ ಮಾತ್ರ ಗಳಿಸಲು ಶಕ್ತವಾಯಿತು. ಮೊದಲ ವಿಕೆಟ್ ಗೆ 97 ರನ್ ಗಳಿಸಿದ್ದ ಭಾರತ ನಂತರ ಸತತ ವಿಕೆಟ್ ಕಳೆದುಕೊಂಡಿತು. ಅದರಲ್ಲೂ 10 ಓವರ್ ಗಳ ಅಂತರದಲ್ಲಿ ಭಾರತ ಆರು ವಿಕೆಟ್ ಕಳೆದುಕೊಂಡಿತು.
ಪಂದ್ಯದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ, ನೀವು ಪಂದ್ಯ ಸೋತಾಗ ಎಲ್ಲವೂ ನಿಮಗೆ ಬೇಸರ ತರಿಸುತ್ತದೆ. ಇದು ಕೇವಲ ಆ ಹತ್ತು ಓವರ ವಿಷಯವಲ್ಲ. ನೀವು ಸ್ಥಿರ ಕ್ರಿಕೆಟ್ ಆಡಬೇಕಾಗುತ್ತದೆ, ಆದರೆ ನಾವು ಅದರಲ್ಲಿ ಸೋತೆವು. ಸ್ವಲ್ಪ ಬೇಜಾರಾಗಿದೆ, ಆದರೆ ಇಂತಹ ವಿಷಯಗಳು ನಡೆಯುತ್ತದೆ ಎಂದರು.ನಾವು ಸಾಕಷ್ಟು ಒಳ್ಳೆಯ ಪಂದ್ಯ ಆಡಲಿಲ್ಲ. ನಾವು ಹೇಗೆ ಆಡಿದ್ದೇ ವೆ ಎಂಬುದರ ಬಗ್ಗೆ ಹೆಚ್ಚು ನೋಡಲು ಬಯಸುವುದಿಲ್ಲ. ಎಂದು ರೋಹಿತ್ ಹೇಳಿದರು.
ಇಲ್ಲಿನ ಪಿಚ್ ಪರಿಸ್ಥಿತಿಗೆ ಬ್ಯಾಟರ್ ಗಳು ಶೀಘ್ರ ಹೊಂದಿಕೊಳ್ಳಬೇಕು ಎಂದು ರೋಹಿತ್ ಹೇಳಿದರು.