ಢಾಕಾ, ಆ.0೬(DaijiworldNews/AK): ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ತನ್ನ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ದೇಶ ತೊರೆದ ಬೆನ್ನಲ್ಲೇ ಬಾಂಗ್ಲಾದಲ್ಲಿ ಪುಂಡರು ಅಟ್ಟಹಾಸ ಮೆರೆಯುತ್ತಿದ್ದಾರೆ. ಪ್ರತಿಭಟನಾಕಾರರು ಬಾಂಗ್ಲಾದ ಮಾಜಿ ಕ್ರಿಕೆಟಿಗ, ಮತ್ತು ಸಂಸದ ಮಶ್ರಫೆ ಮೊರ್ತಾಜಾ ಅವರ ಮನೆಗೆ ಬೆಂಕಿ ಹಚ್ಚಿದ್ದಾರೆ.
ಮಶ್ರಫ್-ಬಿನ್-ಮೊರ್ತಾಜಾ ಅವರು ಶೇಕ್ ಹಸಿನಾ ಅವರ ಪಕ್ಷವಾದ ಅವಾಮಿ ಲೀಗ್ನಿಂದ ಖುಲ್ನಾ ವಿಭಾಗದ ನರೈಲ್ ಕ್ಷೇತ್ರದ ಸಂಸದರಾಗಿ ಎರಡನೇ ಬಾರಿ ಆಯ್ಕೆಯಾಗಿದ್ದರು. ಪುಂಡರು ಮೊರ್ತಾಜಾ ಅವರ ಮನೆಗೆ ನುಗ್ಗಿ ಬೆಂಕಿ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ.
ಮೊರ್ತಾಜಾ ಅವರು ಬಾಂಗ್ಲಾದೇಶದ ಪರವಾಗಿ 117 ಕ್ರಿಕೆಟ್ ಪಂದ್ಯಗಳನ್ನಾಡಿ ನಿವೃತ್ತಿ ಹೊಂದಿದ್ದಾರೆ. ಅಂತರರಾಷ್ಟ್ರಿಯ ಕ್ರಿಕೆಟ್ನಲ್ಲಿ 390 ವಿಕೆಟ್ ಗಳಿಸಿ 2,955 ರನ್ ಗಳಿಸಿದ್ದರು.
ಕ್ರಿಕೆಟ್ಗೆ ವಿದಾಯ ಹೇಳಿದ ನಂತರ ಅವರು 2018 ರಲ್ಲಿ ರಾಜಕೀಯಕ್ಕೆ ಪ್ರವೇಶ ಮಾಡಿದ್ದ ಇವರು ರೈಲ್ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಸದಸ್ಯರಾಗಿ ಆಯ್ಕೆಯಾಗಿದ್ದರು.