ಬಂಟ್ವಾಳ, ಜ.28 (DaijiworldNews/AA): ಇಲ್ಲಿನ ಅಮ್ಟಾಡಿ ಗ್ರಾಮದ ಮಹಲ್ತೋಟ ನಿವಾಸಿ, ಪ್ರಸಕ್ತ ಉಡುಪಿ ಜಿಲ್ಲೆಯ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಉಪನ್ಯಾಸಕಿ ಆಗಿರುವ ಕ್ಲೇರಾ ಮಿನೇಜಸ್ ಇವರು ಮಂಡಿಸಿದ 'ರಿಟೈಲಿಂಗ್ ಇನ್ ಇಂಡಿಯಾ ಟ್ರೆಂಡ್ಸ್ ಎಂಡ್ ಚಾಲೆಂಜಸ್, ಎ ಸ್ಟಡಿ ವಿದ್ ರೆಫೆರೆನ್ಸ್ ಟು ದಿ ಕರ್ನಾಟಕ ಸ್ಟೇಟ್' ಸಂಶೋಧನಾ ಪ್ರಬಂಧಕ್ಕೆ ಆಂಧ್ರಪ್ರದೇಶದ ಕುಪ್ಪಂ ಶ್ರೀನಿವಾಸವನಂ ದ್ರಾವಿಡಿಯನ್ ವಿಶ್ವ ವಿದ್ಯಾನಿಲಯವು ಪಿ ಎಚ್ಡಿ ಪದವಿ ನೀಡಿ ಗೌರವಿಸಿದೆ.

ಉಡುಪಿ ಪೂರ್ಣಪ್ರಜ್ಞ ಇನ್ಸ್ಟಿ ಟ್ಯೂಟ್ ಆಫ್ ಮೆನೇಜ್ ಮೆಂಟ್ ನಿರ್ದೇಶಕ ಡಾ.ಎಂ.ಆರ್.ಹೆಗ್ಡೆ ಇವರು ಪ್ರಬಂಧಕ್ಕೆ ಮಾರ್ಗದರ್ಶನ ನೀಡಿದ್ದರು ಎಂದು ಪ್ರಕಟಣೆ ತಿಳಿಸಿದೆ.