ತ್ರಿಶೂರ್, ಜು 09 (DaijiworldNews/MS):ಇಸ್ಲಾಮಿ ಸಂಘಟನೆಯೊಂದು ಕೇರಳದ ತ್ರಿಶೂರ್ ಸರ್ಕಾರಿ ವೈದ್ಯಕೀಯ ಕಾಲೇಜು ವೈದ್ಯಕೀಯ ವಿದ್ಯಾರ್ಥಿಗಳಿಗೆ ‘ಲಿಂಗ ರಾಜಕೀಯ’ ಕುರಿತು ತರಗತಿಗಳನ್ನು ನಡೆಸಿದ್ದು, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರನ್ನು ಪ್ರತ್ಯೇಕವಾಗಿ ಕುಳಿತುಕೊಳ್ಳುವಂತೆ ಮಾಡಿ, ಪರದೆಯಿಂದ ವಿಭಜಿಸಿದ ವಿವಾದವೊಂದು ಕೇರಳದಲ್ಲಿ ಭುಗಿಲೆದ್ದಿದೆ.
ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ತು, ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ), ಆಡಳಿತಾರೂಢ ಸಿಪಿಐ(ಎಂ)ನ ವಿದ್ಯಾರ್ಥಿಗಳ ಘಟಕ ಮತ್ತು ಇತರ ಇಸ್ಲಾಂ ಸಂಘಟನೆ ಇದನ್ನು ತೀವ್ರವಾಗಿ ಆಕ್ಷೇಪಿಸಿವೆ.
'ಮುಜಾಹಿದ್ ವಿಸ್ಡಮ್ ಇಸ್ಲಾಮಿಕ್ ಆರ್ಗನೈಸೇಷನ್' ಎಂಬ ಸಂಘಟನೆಯು 'ಇಸ್ಲಾಮಿಕ್ ದೃಷ್ಟಿಕೋನದಿಂದ ಎಲ್ಜಿಬಿಟಿಕ್ಯುಐಎ+ ಅನ್ನು ಅರ್ಥಮಾಡಿಕೊಳ್ಳುವುದು' ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಇತ್ತೀಚೆಗೆ ತರಗತಿಗಳನ್ನು ನಡೆಸಿದೆ.
ತರಗತಿ ನಡೆಸಿದ ಗ್ರೂಪ್ನ ಪದಾಧಿಕಾರಿಯೊಬ್ಬರು ಅದರ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ಇದು ಬೆಳಕಿಗೆ ಬಂದಿದೆ. ಹೀಗಾಗಿ ಕೇರಳದಲ್ಲಿ ವಿವಾದ ಉಂಟಾಗಿದೆ.
ಎರಡು ಲಿಂಗಗಳನ್ನು ಪ್ರತ್ಯೇಕಿಸಲು ಪ್ರತ್ಯೇಕಗೊಳಿಸುವ ದೃಷ್ಟಿಕೋನದಿಂದಲೇ ಪರದೆಯನ್ನು ಹಾಕಬಹುದು. ತರಗತಿಗಳ ವೆಚ್ಚವನ್ನು ನಾವೇ ಭರಿಸಿದ್ದೇವೆ ಎಂದು ಎಂದು ಸಂಘಟನೆ ಹೇಳಿದೆ.
ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆಯೇ "ನಿಮ್ಮ ಹತಾಶೆಯನ್ನು ತೋರಿಸಿ ಮತ್ತು ಮಕ್ಕಳೇ ಹೋಗಿ" ಎಂದು ಸಂಘಟನೆ ಪ್ರತಿಕ್ರಿಯೆಯಾಗಿ ಹೇಳಿದೆ.
'ತರಗತಿ ನಡೆಸಿದವರು ಪರದೆಯ ಬಗ್ಗೆ ಯಾಕೆ ಸೂಕ್ತ ವಿವರಣೆ ನೀಡಿಲ್ಲ. ತರಗತಿಗೆ ಹಾಜರಾದವರು ಪರದೆಯ ಬಗ್ಗೆ ಏಕೆ ಪ್ರಶ್ನೆ ಮಾಡಿಲ್ಲ' ಎಂದು ಕೇರಳದ 'ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ತು' ಪ್ರಶ್ನಿಸಿದೆ.
ಲಿಂಗ ರಾಜಕೀಯದ ಕುರಿತ ತರಗತಿಯಲ್ಲಿ ವಿದ್ಯಾರ್ಥಿಗಳ ನಡುವೆ ಪರದೆ ಕಟ್ಟಿದ ವಿಚಾರವಾಗಿ ಸಾಮಾಜಿಕ ಮಾಧ್ಯಮದಲ್ಲಿ ಖಂಡನೆ ವ್ಯಕ್ತವಾದರೂ, ತನ್ನ ನಡೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಸಂಘಟನೆ ಹೇಳಿಕೊಂಡಿದೆ.