ನವದೆಹಲಿ, ಜು 22 (DaijiworldNews/DB): ಉದ್ಯಮಿ ನೀರವ್ ಮೋದಿಗೆ ಜಾರಿ ನಿರ್ದೇಶನಾಲಯವು ಬಿಗ್ ಶಾಕ್ ನೀಡಿದೆ. ರತ್ನಗಳು, ಆಭರಣಗಳು ಸೇರಿ ಬ್ಯಾಂಕ್ ಠೇವಣಿ 253.62 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿದೆ.
ಈ ಸಂಬಂಧ ಮಾಹಿತಿ ನೀಡಿರುವ ಜಾರಿ ನಿರ್ದೇಶನಾಲಯವು, ಹಾಂಕಾಂಗ್ನಲ್ಲಿ ನೀರವ್ ಮೋದಿ ಗ್ರೂಪ್ ಆಫ್ ಕಂಪನಿಗಳ ಪ್ರಕರಣದಲ್ಲಿ 253.62 ಕೋಟಿ ರೂ.ಗಳ ಮೌಲ್ಯದ ಚರ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಲಾಗಿದೆ. ಇದರಲ್ಲಿ ಜೆಮ್ಸ್ ಮತ್ತು ಜ್ಯುವೆಲ್ಲರೀಸ್ ಹಾಗೂ ಬ್ಯಾಂಕ್ ಬ್ಯಾಲೆನ್ಸ್ ಸೇರಿದೆ ಎಂದು ತಿಳಿಸಿದೆ.
ಇಂದು ಇಡಿ ಮುಟ್ಟುಗೋಲು ಹಾಕಿದ ಆಸ್ತಿ, ಆಭರಣಗಳನ್ನು ಸೇರಿಸಿ ಈ ಪ್ರಕರಣದಲ್ಲಿ ಒಟ್ಟು 2650.07 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಂತಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.