ಗುವಾಹಟಿ, ಸೆ 06 (DaijiworldNews/HR): ಭಯೋತ್ಪಾದಕರ ನಂಟು ಹೊಂದಿರುವ ಖಾಸಗಿ ಮದರಸವೊಂದನ್ನು ಗ್ರಾಮಸ್ಥರು ಧ್ವಂಸಗೊಳಿಸಿರುವ ಘಟನೆ ಅಸ್ಸಾಂನ ಗೋಪಾಲಪುರ ಜಿಲ್ಲೆಯ ದರೋಗರ್ ಅಲ್ಗಾ ಪ್ರದೇಶದಲ್ಲಿ ನಡೆದಿದೆ.
ಬಾಂಗ್ಲಾದೇಶ ಮೂಲದ ಅಮೀನುಲ್ ಇಸ್ಲಾಮ್ ಅಲಿಯಾಸ್ ಉಸ್ಮಾನ್ ಮತ್ತು ಜಹಾಂಗೀರ್ ಆಲೊಮ್ ಎನ್ನುವ ಇಬ್ಬರು ಈ ಮದರಸಾದಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಇವರು ಅಸ್ಸಾಂ ಪೊಲೀಸರಿಗೆ ಬೇಕಾಗಿದ್ದವರಾಗಿದ್ದು ಪರಾರಿಯಾಗಿರುವ ಅವರಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.
ಇನ್ನು ಅಲ್ ಕೈದಾ ಉಗ್ರಸಂಘಟನೆಯೊಂದಿಗೆ ಗುರುತಿಸಿಕೊಂಡಿರುವ ನಿಷೇಧಿತ ಉಗ್ರಸಂಘಟನೆ ಅನ್ಸಾರುಲ್ಲಾ ಬಾಂಗ್ಲಾ ಟೀಮ್ನ ಸದಸ್ಯರಾಗಿದ್ದ ಇಬ್ಬರ ಪತ್ತೆಗಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.