ಬೆಂಗಳೂರು, ಅ 10 (DaijiworldNews/DB): ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಕನ್ನಡದ ಹಿರಿಯ ನಟ ಟಿ.ಎಸ್. ಲೋಹಿತಾಶ್ವ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ನ ಸಾಗರ್ ಅಪೋಲೋ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
500ಕ್ಕೂ ಹೆಚ್ಚು ಚಲನಚಿತ್ರ, ನಾಟಕ, ಧಾರವಾಹಿಗಳಲ್ಲಿ ನಟಿಸಿರುವ ಖ್ಯಾತಿ ಅವರದು. ನಾಟಕ, ಕವನ ಸಂಕಲನ, ಕಥಾ ಸಂಕಲನಗಳನ್ನೂ ಹೊರ ತಂದಿದ್ದಾರೆ.